ಬೆಂಗಳೂರು,ನ.10- ಜನತೆಯ ಮುಂದೆ ಅಹಂಕಾರ, ದರ್ಪ ನಡೆಯುವುದಿಲ್ಲ ಎಂಬುದಕ್ಕೆ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರತಿಪಕ್ಷದ ವಿಧಾನಸಭೆ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಕ್ಕ ಪಾಠ ಕಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಯಾವ ರೀತಿ ಮಾತನಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ದರ್ಪ ಮತ್ತು ಅಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಹುಲಿಯ ಈಗ ಕಾಡಿಗೆ ಹೋದರೆ, ಬಂಡೆಯನ್ನು ಜನ ಛಿದ್ರ ಮಾಡಿದ್ದಾರೆ. ಜನತೆಯ ಮುಂದೆ ನಮ್ಮ ಆಟಗಳು ನಡೆಯುವುದಿಲ್ಲ ಎಂಬುದಕ್ಕೆ ಈ ಉಪಚುನಾವಣೆಯ ಫಲಿತಾಂಶ ಎಲ್ಲರಿಗೂ ಎಚ್ಚರಿಕೆಯ ಗಂಟೆ ಎಂದು ಹೇಳಿದರು.
Laxmi News 24×7