ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ(lokasabhe election) ಕಾಂಗ್ರೆಸ್ ಮಣಿಸಲು ರಾಜ್ಯದಲ್ಲಿ ಜೆಡಿಎಸ್(JDS) ಮತ್ತು ಬಿಜೆಪಿ(BJP) ಜೊತೆಯಾಗಿ ನಿಂತಿವೆ. ಸೀಟು ಹಂಚಿಕೆ ವಿಚಾರ ಇನ್ನೂ ಪಕ್ಕಾ ಆಗದಿದ್ದರೂ ರಾಜ್ಯ ನಾಯಕರು ಎಲ್ಲಾ ವಿಚಾರದಲ್ಲಿ ಸಮನ್ವಯತೆ ಕಾದುಕೊಂಡು ಒಟ್ಟಾಗಿ ಕೆಲಸ ಮಾಡ್ತಿದ್ದಾರೆ.
ಆದರೆ ಈ ಮಧ್ಯೆ ಅಚ್ಚರಿ ಬೆಳವಣಿಗೆ ನಡೆದಿದೆ.
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೆಗೌಡ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾಗಿ ಸುದೀರ್ಘ ರಾಜಕೀಯ ಚರ್ಚೆ ನಡೆಸಿದ್ದಾರೆ. ಒಂದೆಡೆ ಮೈತ್ರಿ ವಿಚಾರದಲ್ಲಿ ಸೀಟು ಹಂಚಿಕೆ ಫೈನಲ್ ಮಾಡಲು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆದರೆ, ಇನ್ನೊಂದೆಡೆ ಜೆಡಿಎಸ್, ಕಾಂಗ್ರೆಸ್ ಹಿರಿಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೀಗಾಗಿ ದೇವೆಗೌಡರ ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಈ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಟ್ವೀಟ್ ಮಾಡಿದ್ದು, ಸಂಸತ್ ಭವನದಲ್ಲಿ ಹೆಚ್ ಡಿ ದೇವೆಗೌಡ, ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾದ ಫೋಟೊವನ್ನು ಶೇರ್ ಮಾಡಿದ್ದಾರೆ. ಸದ್ಯ ಈ ಭೇಟಿ ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಠಿಸಿದೆ.