Breaking News

ಸುವರ್ಣಸೌಧದಲ್ಲಿ‌ ಸ್ಪೀಕರ್, ಸಭಾಪತಿಗಳು ಹಸಿರೀಕರಣಕ್ಕೆ ಪಣ ತೊಟ್ಟಿದ್ದಾರೆ

Spread the love

ಬೆಳಗಾವಿ: ಸುವರ್ಣಸೌಧದಲ್ಲಿ ಪರಿಸರ ಕಾಳಜಿ ಮೆರೆಯುವ ನಿಟ್ಟಿನಲ್ಲಿ ಸ್ಪೀಕರ್ ಯು ಟಿ ಖಾದರ್ ಚಳಿಗಾಲದ‌ ಅಧಿವೇಶನದಲ್ಲಿ ವಿನೂತನ ಪ್ರಯೋಗವೊಂದನ್ನು ಆರಂಭಿಸಿದ್ದಾರೆ. ಸುವರ್ಣಸೌಧದ ಆವರಣದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರಿನಲ್ಲಿ ಗಿಡ ನೆಡುವ ಮೂಲಕ ಶಾಸಕರ ಹೆಸರನ್ನು ಶಾಶ್ವತವಾಗಿ ಹಸಿರಾಗಿಸಲು ಮುಂದಾಗಿದ್ದಾರೆ.

ಸುವರ್ಣ ಸೌಧದ ಪ್ರವೇಶ ರಸ್ತೆಯ ಪಕ್ಕದಲ್ಲಿ ಹಣ್ಣು ಹಂಪಲುಗಳು ಹಾಗೂ ಅಪರೂಪದ ಹೂವು ಬಿಡುವ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎಲ್ಲಾ ಶಾಸಕರ ಹೆಸರಿನಲ್ಲಿ ಗಿಡ ನೆಡುವ ಮೂಲಕ ಶಾಶ್ವತವಾಗಿ ಅವರ ಹೆಸರುಗಳು ಹಸಿರಾಗಿಸುವ ವಿನೂತನ ಕಾರ್ಯವನ್ನು ಆರಂಭಿಸಿದ್ದಾರೆ. ಸ್ಪೀಕರ್ ಸೂಚನೆಯ ಮೇರೆಗೆ ಸ್ವತಃ ಶಾಸಕರೇ ಬಂದು ಈ ಗಿಡಗಳನ್ನು ನೆಡುತ್ತಿದ್ದಾರೆ.

ಗಿಡಗಳಿಗೆ ಶಾಸಕರ ಹೆಸರು: ವಿಧಾನಸಭೆಯ 224 ಶಾಸಕರು ಹಾಗೂ ವಿಧಾನ ಪರಿಷತ್ 75 ಸದಸ್ಯರುಗಳಿಗೆ ಸುವರ್ಣ ಸೌಧದ ಬಲ ಭಾಗದಲ್ಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಿದೆ. ಪ್ರತಿಯೊಂದು ಗಿಡಗಳ ಮುಂದೆ ಅವುಗಳನ್ನು ನೆಟ್ಟ ಶಾಸಕರ‌ ಹೆಸರಿನ ನೇಮ್‌ಪ್ಲೇಟ್ ಅಳವಡಿಸಲಾಗಿದೆ. ಗಿಡದ ಹೆಸರು ಹಾಗೂ ಆ ಗಿಡ ನೆಟ್ಟ ಶಾಸಕರ ಹೆಸರಿನ ಫಲಕವನ್ನು ಅಳವಡಿಸಲಾಗುತ್ತಿದೆ. ನೆಟ್ಟ ಗಿಡಗಳ ಆರೈಕೆಗೂ ಹೆಚ್ಚಿನ ಮುತುವರ್ಜಿ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸ್ಪೀಕರ್ ಯು ಟಿ ಖಾದರ್ ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ