ಬೆಂಗಳೂರು: ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿರುವುದಕ್ಕೆ ಅಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮದೇ ಸರ್ಕಾರವನ್ನು ಕುಟುಕಿರುವ ಯತ್ನಾಳ್, ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ರೀತಿಯಲ್ಲೇ ಬ್ಲಡ್‍ಲೆಸ್ ಬಕ್ರೀದ್, ನಾಯ್ಸ್ ಲೆಸ್ ಫ್ರೈಡೇನೂ ಮಡೋಣ ಎಂದು ಪೋಸ್ಟ್ ಹಾಕಿದ್ದಾರೆ.
ಈ ವಿಚಾರವಾಗಿ ಫೇಸ್‍ಬುಕ್ ಪೋಸ್ಟ್ ಹಾಕಿರುವ ಅವರು, ಹಿಂದೂಗಳು ಸಾಮೂಹಿಕವಾಗಿ ಸೇರುವುದೇ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ, ದಸರಾ-ದುರ್ಗಪೂಜೆ ಮತ್ತು ದೀಪವಾಳಿ ಸಮಯದಲ್ಲಿ. ಆದರೆ ಗಣೇಶ ಹಬ್ಬ ಬಂದ್ರೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ, ದೀಪಾವಳಿ ಬಂದ್ರೆ ನಾಯ್ಸ್ ಲೆಸ್ ದೀಪಾವಳಿ ಮಾಡಿ ಎಂದು ಭೋದನೆ ಮಾಡುತ್ತಾರೆ ಎಂದು ತಮ್ಮದೇ ಪಕ್ಷದ ತೀರ್ಮಾನಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ಇವುಗಳ ಜೊತೆಗೆ ನಾಯ್ಸ್ ಲೆಸ್ ಫ್ರೈಡೇ, ಬ್ಲಡ್‍ಲೆಸ್ ಬಕ್ರಿದ್ ನತ್ತು ಕ್ರ್ಯಾಕರ್ಲೆಸ್ ಡಿಸೆಂಬರ್ 31 ನೈಟ್ ಇವೆಲ್ಲವುಗಳನ್ನು ಮಡೋಣ. ಬಕ್ರಿದ್‍ನಲ್ಲಿ ರಕ್ತ ಹರಿಸುವುದು ಬೇಡ. ಡಿಸೆಂಬರ್ 31ರಂದು ಪಟಾಕಿ ಹೊಡೆಯುವುದು ಬೇಡ. ಫ್ರೈಡೇ ಸ್ಪೀಕರಿನಲ್ಲಿ ಕೂಗುವುದು ಬೇಡ. ರಸ್ತೆ ಮೇಲೆ ನಮಾಜು ಮಾಡುವುದು ಬೇಡ. ಬೀದಿಲಿ ಪಟಾಕಿ ಹೊಡೆಯೋದು ಬೇಡ. ನಾವೆಲ್ಲ ಮನೆಯಲ್ಲಿ ದೀಪ ಹಚ್ಚುತ್ತೇವೆ, ಅವರು ಸ್ಪೀಕರ್ ಹಚ್ಚದೇ ನಾಮಜು ಮಾಡಲಿ ರಸ್ತೆ ಮೇಲೆ ಬೇಡ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.