ಬೆಂಗಳೂರು ರಾಜ್ಯದ 100 ಸರ್ಕಾರಿ ಶಾಲೆ ಮಕ್ಕಳಿಗೆ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ಫುಟ್ ಬಾಲ್ ತರಬೇತಿ ಕೊಡಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಆಡುಗೋಡಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐಟಿಸಿ ಸನ್‌ಫೀಸ್ಟ್, ಸ್ಟಾರ್ಸ್ ೌಂಡೇಷನ್ ಮತ್ತು ಎಸ್ ಸ್ಪೋರ್ಟ್ಸ್ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ‘ ಬೌನ್ಸ್ ಆ ಜಾಯ್’ ಫುಟ್ ಬಾಲ್ ತರಬೇತಿ ಮತ್ತು ದೈಹಿಕ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿಯೇ ರಾಜ್ಯದ ಎಲ್ಲ ಮಕ್ಕಳೂ ಓದಬೇಕೆಂಬುದು ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಶಿಕ್ಷಣದ ಜತೆಜತೆಗೆ ಕ್ರೀಡಾ ಚಟುವಿಕೆಗಳನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವುದರಿಂದ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಸಾದ್ಯವಾಗಲಿದೆ. ಸರ್ಕಾರಿ ಶಾಲೆ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಸರ್ಕಾರದ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಟಿಸಿ ಬಿಸ್ಕೆಟ್ಸ್ ಮತ್ತು ಕೇಕ್ ುಡ್ ಲಿ. ಸಿಇಒ ಅಲಿ ಹ್ಯಾರಿಸ್ ಶೇರ್, ಪಾಲಿಕೆ ಮಾಜಿ ಸದಸ್ಯ ಆಡುಗೋಡಿ ಬಿ.ಮೋಹನ್, ಸುದ್ದಗುಂಟೇ ಪಾಳ್ಯ ಮಂಜುನಾಥ್, ಚಂದ್ರಪ್ಪ ಮತ್ತು ಡಾ. ಭಾವನಾ ಶರ್ಮಾ ಉಪಸ್ಥಿತರಿದ್ದರು.
ಕಲೆ, ಸಂಸ್ಕೃತಿಯ ಪ್ರತ್ಯೇಕ ಪಠ್ಯಕ್ಕೆ ಚಿಂತನೆ
ಶಾಲೆಗಳಲ್ಲಿ ಮಕ್ಕಳಿಗೆ ಕಲೆ ಮತ್ತು ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಮತ್ತು ತೊಡಗಿಸಿಕೊಳ್ಳುವಂತೆ ಸಹಾಯವಾಗುವಂತೆ ಕಲೆ, ಸಂಸ್ಕೃತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪಠ್ಯ ವಿಷಯವನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.