ಕೆಪಿಸಿಸಿ ಕಾರ್ಯಾಧ್ಯಕ್ಷರ ಹೊಸ ಬಾಂಬ್:
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಸೇರಲು ಹಲವಾರು ಬಿಜೆಪಿ ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಹಲವು ಶಾಸಕರು ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ. ಬೆಳಗಾವಿ ಅಧಿವೇಶನ ಮುಗಿಯಲಿ ಎಂದು ಸಲೀಂ ಅಹ್ಮದ್ ಹೇಳಿದರು.
ಬೆಳಗಾವಿ ಅಧಿವೇಶನದ ಬಳಿಕ ಸಾಕಷ್ಟು ಜನರು ಸೇರಬೇಕು ಅಂತಿದ್ದಾರೆ. ಸೂಕ್ತ ಸಮಯದಲ್ಲಿ ಅದನ್ನ ಹೇಳುತ್ತೇವೆ. ಬಿಜೆಪಿಯ ಪಾಪದ ಕೊಡ ತುಂಬಿತ್ತು. ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿ ಹೋಗುತ್ತಾರೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಬಿಜೆಪಿಯವರು. ನಮಗೆ ಆಪರೇಷನ್ ಹಸ್ತ ಮಾಡಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ನಿಂದ ನೊಂದು ಹಲವರು ಕಾಂಗ್ರೆಸ್ ಸೇರಲು ಆಸೆ ಪಟ್ಟಿದ್ದಾರೆ ಎಂದು ಹೇಳಿದರು.