ಸುಮಾರು ಆರು ವರ್ಷಗಳ ನಂತರ ಹಾಸ್ಯನಟರಾದ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಕೊನೆಗೂ ಒಂದಾಗಿದ್ದಾರೆ. ಕಪಿಲ್ ಶರ್ಮಾ ಶೋದಲ್ಲಿ ಇಬ್ಬರನ್ನು ವೇದಿಕೆಯ ಮೇಲೆ ನೋಡಿ ಬಹಳ ದಿನವಾಗಿದ್ದ ಪ್ರೇಕ್ಷಕರಿಗೆ ಕೊನೆಗೂ ಈ ಸ್ನೇಹಿತರು ತಮ್ಮ ಕೋಪವನ್ನು ಬದಿಗಿಟ್ಟು, ಒಂದಾಗಿ ಮತ್ತೇ ನಗಿಸಲು ವೇದಿಕೆಯ ಮೇಲೆ ಬರಲಿದ್ದಾರೆ.
ಹೌದು.. ಕಪಿಲ್ ಮತ್ತು ಸುನೀಲ್ ಅಂತಿಮವಾಗಿ ತಮ್ಮ ಹಠವನ್ನು ಬಿಟ್ಟು, ನೆಟ್‌ಫ್ಲಿಕ್ಸ್ ಶೋನ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೇ ಒಂದೇ ವೇದಿಕೆಯ ಮೇಲೆ ಪ್ರೇಕ್ಷಕರಿಗೆ ನಗೆ ಔತಣ ನೀಡಲು ರೆಡಿಯಾಗಿದ್ದಾರೆ. ಈ ಕುರಿತು ಸುದ್ದಿ ತಿಳಿದ ಇಬ್ಬರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.