ರಾಯಬಾಗ: ತಾಲ್ಲೂಕಿನ ಕಂಕಣವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾನಂದ ನಗರ, ಮೊಳವಾಡ ತೋಟ ಹಾಗೂ ಖನದಾಳೆ ತೋಟದಲ್ಲಿ ₹45.85 ಲಕ್ಷ ಅನುದಾನದಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾಗಿದ್ದ ನೂತನ ಕೊಠಡಿಗಳನ್ನು ಶುಕ್ರವಾರ ಶಾಸಕ ಡಿ.ಎಂ. ಐಹೊಳೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ನಿಮ್ಮ ಜವಾಬ್ಧಾರಿ ಕೊನೆಗೊಳ್ಳುವುದಿಲ್ಲ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕ-ಪೋಷಕರಿಗೂ ಇರುತ್ತದೆ ಎಂದು ಹೇಳಿದರು.
ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ನಾವು ಅವರ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಲ್ಲಿ ಎಡವುತ್ತಿದ್ದೇವೆ. ಪಾಲಕರು ಶಾಲೆಗೆ ತೆರಳಿ ಅವರ ಶೈಕ್ಷಣಿಕ ಪ್ರಗತಿ ಬಗ್ಗೆ ಶಿಕ್ಷಕರಿಂದ ತಿಳಿದುಕೊಳ್ಳುವ ಕೆಲಸ ಪಾಲಕರು ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗುಳೆ, ಪಿ.ಎಸ್.ಶಾರಬಿದ್ರೆ, ಅಪ್ಪಾಸಾಬ ಬ್ಯಾಕೂಡೆ, ರಾಜಶೇಖರ ಖನದಾಳೆ, ರಮೇಶ ಪೂಜಾರಿ, ಪ್ರಕಾಶ ಸುಳ್ಳನ್ನವರ, ನವೀನ ವಾಘ, ಅಪ್ಪಾಸಾಬ ಗಡ್ಕರಿ,ಮಹೇಶ ಗಾಡಿವಡ್ಡರ, ಶ್ರೀಶೈಲ ಮೂಡಲಗಿ, ಸಿ. ಎಸ್.ಕಾಂಬಳೆ, ಮಸೂದ್ ಮುಲ್ಲಾ ಇದ್ದರು.