ಮೂಡಲಗಿ: ‘ಮನಸ್ಸಿದ್ದರೆ ಏನೆಲ್ಲ ಮಾಡಬಹುದು, ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಯುವ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿಯಾಗಿದ್ದಾರೆ.
2008ರಲ್ಲಿ ಬಿಎ ಪದವಿ ಮುಗಿಸಿ ನೌಕರಿ ದೊರೆಯದಿದ್ದಾಗ ಒಂದೇ ಆಕಳು ಸಾಕಿ ಹೈನುಗಾರಿಕೆ ಆರಂಭಿಸಿ ಹೊನ್ನಪ್ಪ ಅವರ ಹೊಲದಲ್ಲಿ ಇಂದು 20ಕ್ಕೂ ಅಧಿಕ ಎಚ್‌ಎಫ್ ತಳಿಯ ಹಸುಗಳು ಇವೆ.
ಪ್ರತಿ ದಿನ ಬೆಳಿಗ್ಗೆ 100 ಲೀಟರ್, ಸಂಜೆ 100 ಲೀಟರ್ ಹೀಗೆ ನಿತ್ಯ 200 ಲೀಟರ್ ಹಾಲು ಉತ್ಪಾದಿಸಿ ಗ್ರಾಮದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. 2022-23ನೇ ಸಾಲಿನಲ್ಲಿ ಬೆಳಗಾವಿಯ ಕೆಎಂಎಫ್ ಕೊಡಮಾಡಿರುವ ಇಡೀ ಬೆಳಗಾವಿ ಜಿಲ್ಲೆಯಲ್ಲಿ ‘ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿರುವ ರೈತ’ ಎನ್ನುವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
Laxmi News 24×7