Breaking News

ರಾಜ್ಯಕ್ಕೆ ಐಜಿಎಸ್​​ಟಿ ಕಡಿತ ಆಘಾತ: ಸ್ಪಷ್ಟನೆ ಕೋರಿ ಕೇಂದ್ರ ಸಚಿವರಿಗೆ ಸಿಎಂ ಪತ್ರ

Spread the love

ಬೆಂಗಳೂರು: ಬರ, ಗ್ಯಾರಂಟಿ ಯೋಜನೆಗಳಿಂದ ತೀವ್ರ ಆರ್ಥಿಕ ಹೊರೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಇದೀಗ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ.‌ ಕೇಂದ್ರ ಸರ್ಕಾರ ಕರ್ನಾಟಕದ ಐಜಿಎಸ್​​ಟಿ ಸಂಗ್ರಹದಿಂದ 798 ಕೋಟಿ ರೂ.‌ ಕಡಿತಗೊಳಿಸಿದೆ.

 

IGST ಅಂದರೆ ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಆಗಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸರಕು ಮತ್ತು ಸೇವೆಗಳು ಚಲಿಸಿದಾಗ ಐಜಿಎಸ್​ಟಿ ವಿಧಿಸಲ್ಪಡುತ್ತದೆ. ಐಜಿಎಸ್​ಟಿ ಹಂತದಲ್ಲಿ ಬರುವ ಆದಾಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ. ಐಜಿಎಸ್​​ಟಿ ತೆರಿಗೆ, ಸರಕು ಉತ್ಪತ್ತಿಯಾದ ರಾಜ್ಯದಿಂದ ಅದು ತಲುಪುವ ರಾಜ್ಯಕ್ಕೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡುತ್ತದೆ. ಹೀಗೆ ನವೆಂಬರ್​​ನಲ್ಲಿ ರಾಜ್ಯ ಸಂಗ್ರಹಿಸಿರುವ ಐಜಿಎಸ್​​ಟಿಯಿಂದ ಕೇಂದ್ರ ಸರ್ಕಾರ 798.03 ಕೋಟಿ ರೂ. ಕಡಿತ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆಘಾತ ನೀಡಿದೆ.

ಏತಕ್ಕಾಗಿ ರಾಜ್ಯದ ಐಜಿಎಸ್​ಟಿ ಕಡಿತ?: ನವೆಂಬರ್​​ನಲ್ಲಿ ರಾಜ್ಯ ಸಿಜಿಎಸ್​​ಟಿ, ಎಸ್​​ಜಿಎಟ್​​ಸಿ​ ಹಾಗೂ ಐಜಿಎಸ್​​ಟಿ ರೂಪದಲ್ಲಿ ಒಟ್ಟು 11,970 ಕೋಟಿ ರೂ.‌ ಸಂಗ್ರಹ ಮಾಡಿದೆ. ಕರ್ನಾಟಕ ನವೆಂಬರ್ ತಿಂಗಳಲ್ಲಿ ಐಜಿಎಸ್​​ಟಿ ರೂಪದಲ್ಲಿ ಕೇಂದ್ರ ಸರ್ಕಾರದಿಂದ 3,600 ಕೋಟಿ ರೂ. ಪಡೆಯಬೇಕಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಅದರಿಂದ 798.03 ಕೋಟಿ ರೂ.‌ ಕಡಿತಗೊಳಿಸಿದೆ.

ರಾಜ್ಯಗಳಿಗೆ ಸುಮಾರು 34,000 ಕೋಟಿ ರೂ. ಮೊತ್ತದಷ್ಟು ನಿಗದಿಗಿಂತ ಹೆಚ್ಚುವರಿ ಹೂಡುವಳಿ ತೆರಿಗೆ ಜಮೆ (input tax returns)ಯಾಗಿದ್ದು, ರಾಜ್ಯ ಹಾಗೂ ಕೇಂದ್ರದ ಪಾಲಿನ IGST ಯಿಂದ ಕಡಿತ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಕೇಂದ್ರ ಸರ್ಕಾರ ತನ್ನ ಪಾಲಿನ ಐಜಿಎಸ್​​ಟಿ ಯಿಂದ 17,000 ಕೋಟಿ ರೂ. ಹಾಗೂ ರಾಜ್ಯಗಳ ಪಾಲಿನ ಐಜಿಎಸ್​​ಟಿಯಿಂದ 18,000 ಕೋಟಿ ರೂ. ಕಡಿತ ಮಾಡಲಿದೆ. ಈ ಪೈಕಿ ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಂದ 9,000 ಕೋಟಿ ರೂ. ಕಡಿತ ಮಾಡಿದೆ. ಈ ಪೈಕಿ ಕರ್ನಾಟಕ ರಾಜ್ಯದ ಪಾಲಿನಿಂದ ಮೊದಲ ಕಂತಿನಲ್ಲಿ 798.03 ಕೋಟಿ ರೂ. ಕಡಿತವಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ