Breaking News

ವಿಜಯಪುರದಲ್ಲಿ ಭೀಕರ ಬರ ವಿಜಯಪುರದಲ್ಲಿ ಭೀಕರ ಬರ

Spread the love

ವಿಜಯಪುರ: ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿಯೂ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಹೀಗಾಗಿ ಕೆಲವೆಡೆ ಇಡೀ ಗ್ರಾಮದ ಮನೆಗಳಿಗೆ ಬೀಗ ಜಡಿದು ಜನ್ರು ದುಡಿಯೋಕೆ ಹೋಗಿರುವ ದೃಶ್ಯಗಳು ಕಂಡುಬಂದಿವೆ.

ಹೌದು, ವಿಜಯಪುರ ಜಿಲ್ಲೆಯ ಬಹುತೇಕ ಗ್ರಾಮಗಳ ಜನರು ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋಗುತ್ತಾರೆ. ಅವರಲ್ಲಿ ಹೆಚ್ಚಿನ‌ವರು ತಾಂಡಾಗಳ ಜನರೇ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ತೆರಳುತ್ತಿದ್ದಾರೆ. ಹೀಗೆ ಹೋಗುವ ಸಂದರ್ಭದಲ್ಲಿ ತಮ್ಮ ಮನೆಯ ಬಾಗಿಲಿಗೆ ಮುಳ್ಳು ಕಂಟಿ ಹಾಕಿ ಹೋಗುತ್ತಾರೆ. ಒಮ್ಮೆ ಉದ್ಯೋಗ ಅರಸಿ ಅನ್ಯ ರಾಜ್ಯಗಳಿಗೆ ಗುಳೇ ಹೋದರೆ ಕಡಿಮೆ ಎಂದರೂ ಏಳೆಂಟು ತಿಂಗಳು ಕಾಲ ಇವರು ಮರಳಿ ತಮ್ಮ ತಾಂಡಾಗಳಿಗೆ ಬರುವುದಿಲ್ಲ. ಅದರಲ್ಲಂತೂ ವಿಜಯಪುರ ತಾಲೂಕಿನ ಭೂತನಾಳ ಸೇರಿದಂತೆ, ಮದಬಾವಿ ತಾಂಡ 1 ಹಾಗೂ 2 ರಲ್ಲಿ ಹೆಚ್ಚಿನವರು ಅನ್ಯ ರಾಜ್ಯಗಳಿಗೆ ದುಡಿಯಲು ವಲಸೆ ಹೋಗ್ತಾರೆ. ಈ ವೇಳೆ ಕುಟುಂಬಸ್ಥರು ಕಣ್ಣೀರು ಹಾಕುವ ದೃಶ್ಯಗಳು ಮನಕಲಕುವಂತಿವೆ.

ಇವರು ಇಡೀ ಕುಟುಂಬ ಸಮೇತವಾಗಿ ಗುಳೇ ಹೋಗುತ್ತಾರೆ, ಮನೆಯಲ್ಲಿ ವಯೋವೃದ್ಧ ತಂದೆ ತಾಯಂದಿರು ಇದ್ದರಷ್ಟೇ ಅವರ ಬಳಿ ಮಕ್ಕಳನ್ನು ಶಿಕ್ಷಣದ ಉದ್ದೇಶದಿಂದ ಬಿಟ್ಟು ಹೋಗುತ್ತಾರೆ. ಮನೆಯಲ್ಲಿ ನೋಡಿಕೊಳ್ಳುವವರು ಇರದೇ ಇದ್ದಂತಹ ಸಂದರ್ಭದಲ್ಲಿ ಮಕ್ಕಳನ್ನು ಸಹ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಹೀಗಾಗಿ ಚಿಣ್ಣರು ಶಿಕ್ಷಣದಿಂದ ವಂಚಿತರಾಗುವುದು ತಾಂಡಾಗಳಲ್ಲಿ‌ ಸಾಮಾನ್ಯ ಎನ್ನುವಂತಾಗಿದೆ.

ಕೆಲಸ ಸಿಗದ ಹಿನ್ನೆಲೆಯಲ್ಲಿ ವರ್ಷದಲ್ಲಿ 6 ತಿಂಗಳು ಕುಟುಂಬ ಸಮೇತ ಗುಳೆ ಹೋಗುತ್ತೇವೆ. ಮಳೆಗಾಲದಲ್ಲಿ ಊರಿಗೆ ಬಂದು ಮತ್ತೆ ಒಂದಷ್ಟು ತಿಂಗಳು ಇಲ್ಲಿ ವಾಸಿಸುತ್ತೇವೆ. ನಮಗೆ ಸರ್ಕಾರ ಸೂಕ್ತ ದಾರಿ ಮಾಡಿ ಕೊಡಬೇಕು ಎಂದು ಗುಳೆ ಹೊರಟ ಗ್ರಾಮಸ್ಥರೊಬ್ಬರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ