Breaking News

ಕನಕದಾಸರು ಸಮಾಜದ ಅಸಮಾನತೆ ತೊಲಗಿಸಲು ಬಯಸಿದ್ದರು: ಸಿಎಂ ಸಿದ್ದರಾಮಯ್ಯ

Spread the love

ಹಾವೇರಿ: ಕನಕದಾಸರು ದಾಸ ಶ್ರೇಷ್ಠರು ಮಾತ್ರ ಅಲ್ಲ,ಸಮಾಜದ ಅಸಮಾನತೆ ತೊಲಗಿಸಲು ಬಯಸಿದ್ದವರು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

 

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ‌ ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನಕ್ಷರತೆಯಿಂದ, ಜಾತಿ ವ್ಯವಸ್ಥೆಯಿಂದ ಅಸಮಾನತೆ ಸಮಾಜದಲ್ಲಿ ಬಂದಿದೆ. ಜಾತಿ ವ್ಯವಸ್ಥೆ ಹುಟ್ಟು ಹಾಕಿಕೊಂಡವರು ನಾವೇ, ಯಾವ ಧರ್ಮದಲ್ಲಿಯೂ ಜಾತಿ ಮಾಡಿ ಅಂಥ ಹೇಳಿಲ್ಲ.

ಮನುಷ್ಯರನ್ನು ದ್ವೇಷಿಸು ಅಂತ ಹೇಳಿಲ್ಲ. ಮನುಷ್ಯರನ್ನು ಕ್ರೂರವಾಗಿ ನಡೆಸಿಕೊಳ್ಳಬೇಕೆಂದು ಹೇಳಿಲ್ಲ, ದುರ್ಬಲ ವರ್ಗದವರ ಮಹಿಳೆಯರ ಮೇಲೆ ದೌರ್ಜನ್ಯ ಮಾಡಲಿ ಅಂಥ ಹೇಳಿಲ್ಲ. ಜಾತಿ ವ್ಯವಸ್ಥೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡು ಸಮಾಜದಲ್ಲಿ ಅಸಮಾನತೆ ಸೃಷ್ಟಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ವಿಶ್ವಮಾನವರಾಗಬೇಕು:ನಾವು ಮೂಲತಃ ಮನುಷ್ಯರು, ನಾವು ಅರ್ಜಿ ಹಾಕಿಕೊಂಡು ಹುಟ್ಟಿದ್ದೇವಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ , ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಅದು ನಿಜವಾದ ಭಾವೈಕ್ಯತೆ. ಕುವೆಂಪು ಒಂದು ಕಡೆ ನಾವೆಲ್ಲರು ಹುಟ್ಟುತ್ತಲೇ ವಿಶ್ವಮಾನವರು ಅಂತಾರೆ, ಅದರೆ ಬೆಳೆಯುತ್ತ ಅಲ್ಪ ಮಾನವರು ಎಂದು ಬರೆದಿದ್ದಾರೆ. ನಾವೆಲ್ಲರೂ ವಿಶ್ವಮಾನವರಾಗಬೇಕು ಎಂದು ಸಿಎಂ ಸಲಹೆ ನೀಡಿದರು.

ನಾವು ಕುರುಬರ ಮಠ ಆಗಬೇಕು ಅಂತಾ ಮಠ ಮಾಡಲಿಲ್ಲ. ಶೋಷಿತರನ್ನು ಇಟ್ಟುಕೊಂಡು ಮಠ ಮಾಡಿದ್ದೇವೆ. ಕನಕ ಗುರುಪೀಠ ಮಾಡಿದ್ದೇವೆ. ಧರ್ಮ ಇರುವುದು ನಮಗೋಸ್ಕರ ಧರ್ಮಕೊಸ್ಕರ ನಾವಿಲ್ಲ. ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಅಸೂಯೆ ಬಿಡಬೇಕು‌ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ