ಹಾವೇರಿ : ನಿಗಮ ಮಂಡಳಿ ಆಯ್ಕೆ ವಿಚಾರ ನಾವೆಲ್ಲಾ ಚರ್ಚೆ ಮಾಡಿ ಮೊದಲ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡುತ್ತೇವೆ.
ನಾನು, ಸುರ್ಜೆವಾಲ, ಡಿ ಕೆ ಶಿವಕುಮಾರ್ ಕುಳಿತು ಚರ್ಚೆ ಮಾಡ್ತೇವಿ. ಡೆಟ್ ಕೊಟ್ಟಿದ್ದೇವೆ, ಹೈಕಮಾಂಡ್ ನವರು ತೀರ್ಮಾನ ಮಾಡಬೇಕು. ನಾವು ಮಾತಾಡ್ತೇವಿ. ಈಗಾಗಲೇ ಬೆಳಿಗ್ಗೆ ಮಾತನಾಡಿದ್ದೇನೆ. ಇಂದು ಸಂಜೆ ಬೆಂಗಳೂರಿಗೆ ಬರೋಕೆ ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕನಕ ಗುರುಪೀಠದಲ್ಲಿ ಕನಕ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯವಾಗಿ ಕನಕಜಯಂತಿ ಆಚರಣೆಗೆ ಬಂದಿದ್ದೇನೆ ಎಂದರು.
Laxmi News 24×7