ಹಾವೇರಿ: ಸುಮಾರು ಇಪ್ಪತ್ತು ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮಕ್ಕೆ ಆಗಮಿಸಿದ ವೀರಯೋಧ ನಾಗರಾಜ ನಾಗಪ್ಪನವರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ನಾಗರಾಜ ನಾಗಪ್ಪನವರ್ ಅವರು ತಮ್ಮ 18 ವರ್ಷದ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದು,ಬಳಿಕ ಮತ್ತೆ ಎರಡು ವರ್ಷ ಹೆಚ್ಚಿನ ಸೇವೆಯನ್ನು ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಯಲವಿಗಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ವಿಶೇಷ ಗೌರವ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ವೀರಯೋಧ ನಾಗರಾಜ್, ದೇಶ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಹೆತ್ತ ತಾಯಿಯ ಹಾಗೂ ಭೂಮಿತಾಯಿಯ ಋಣ ತೀರಿಸಲು ಸಿಕ್ಕಿರುವ ಅವಕಾಶವಾಗಿದ್ದು, ನಿಜಕ್ಕೂ ನನಗೆ ನನ್ನ ದೇಶ ಸೇವೆ ಖುಷಿ ತಂದಿದೆ ಎಂದರು.

Laxmi News 24×7