Breaking News

ಗೂಡ್ಸ್ ಆಟೋಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ ತರಕಾರಿ ವ್ಯಾಪಾರಸ್ಥ

Spread the love

ಮೈಸೂರು: ಸಾಮಾನ್ಯವಾಗಿ ಮನೆ, ದೊಡ್ಡ ದೊಡ್ಡ ಮಾಲ್​ಗಳು, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದನ್ನು ನೋಡಿದ್ದೇವೆ. ಆದರೆ, ಮೈಸೂರಿನ ತರಕಾರಿ ವ್ಯಾಪಾರಸ್ಥರೊಬ್ಬರು ತಮ್ಮ ಗೂಡ್ಸ್ ಆಟೋಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಇಷ್ಟಕ್ಕೂ ಅವರು ಏಕೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಎದುರಿಗೆ ಇರುವ ರಸ್ತೆಯ ಪಕ್ಕದಲ್ಲಿ. ಗೂಡ್ಸ್ ಆಟೋದಲ್ಲಿ ಅವರೆಕಾಯಿ, ತೊಗರಿಕಾಯಿ, ಕಡ್ಲೆಕಾಯಿ ಸೇರಿದಂತೆ ಆಯಾ ಋತುಮಾನಗಳಲ್ಲಿ ಬೆಳೆಯುವ ತರಕಾರಿಗಳನ್ನು ಹುಣಸೂರಿನ ಬನ್ನಿಕುಪ್ಪೆ ಕಡೆಯಿಂದ ತಂದು ಇಲ್ಲಿ ವ್ಯಾಪಾರ ಮಾಡಲಾಗುತ್ತದೆ. ಆದರೆ ಈ ಗಾಡಿಯ ಮಾಲೀಕ ಮಹದೇವ್, ಇಲ್ಲಿ ಕೆಲಸಕ್ಕೆ ಹುಡುಗರನ್ನು ಇಟ್ಟುಕೊಂಡಿದ್ದು, ಅವರು ಮತ್ತೊಂದು ಕಡೆ ವ್ಯಾಪಾರ ಮಾಡುತ್ತಾರೆ.

ಇಲ್ಲಿ ಸ್ವತಃ ಮಾಲೀಕರೇ ಇದ್ದಾಗ ವ್ಯಾಪಾರ ಚೆನ್ನಾಗಿ ನಡೆಯುತ್ತದೆಯಂತೆ. ಕೆಲಸದ ಹುಡುಗರು ಇದ್ದಾಗ ವ್ಯಾಪಾರ ಹೆಚ್ಚು ಇರುವುದಿಲ್ಲವಂತೆ. ಹೀಗಾಗಿ ಇಲ್ಲಿನ ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ನಿಗಾ ವಹಿಸಲು 6 ಸಾವಿರ ರೂಪಾಯಿ ಕೊಟ್ಟು ಸಿಸಿಟಿವಿ ಖರೀದಿಸಿ ಆಟೋಗೆ ಅಳವಡಿಸಿದ್ದಾರೆ. ಸಿಸಿಟಿವಿ ಕ್ಯಾಮರಾಗೆ ಸಿಮ್ ಮತ್ತು ಮೆಮೊರಿ ಕಾರ್ಡ್ ಇದೆ. ಮಾಲೀಕರು ಎಲ್ಲೇ ಇದ್ದರೂ, ಅಲ್ಲಿಂದ ಇಲ್ಲಿನ ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ತಮ್ಮ ಮೊಬೈಲ್​ನಿಂದಲೇ ನೋಡಬಹುದು ಮತ್ತು ಡೇಟಾವನ್ನು 30 ದಿನಗಳವರೆಗೆ ಉಳಿಸಿಕೊಳ್ಳಬಹುದಾಗಿದೆ.

ಸಿಸಿಟಿವಿ ಕ್ಯಾಮರಾದಿಂದ ವ್ಯಾಪಾರಸ್ಥನಿಗೆ ಹಲವು ಪ್ರಯೋಜನ: ಕೆಲಸಗಾರ ಮನೋಜ್ ಮಾತನಾಡಿ, “ತರಕಾರಿ ಖರೀದಿಸಲು ಹೆಚ್ಚು ಜನರು ಸೇರಿದಾಗ ಕೆಲವರು ಹಣ ಕೊಡದೇ ಹೊರಟು ಹೋಗುತ್ತಾರೆ. ಇನ್ನೂ ಕೆಲವರು 50 ರೂಪಾಯಿ ಕೊಟ್ಟು 500 ರೂಪಾಯಿ ಕೊಟ್ಟೆ ಎನ್ನುತ್ತಾರೆ. ಇಲ್ಲಿ ನಾವು 6 ವರ್ಷಗಳಿಂದ ಅವರೆಕಾಯಿ, ತೊಗರಿಕಾಯಿ, ಕಡ್ಲೆಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ವ್ಯಾಪಾರ ಮಾಡುತ್ತಿದ್ದೇವೆ. ಸಿಸಿಟಿವಿ ಕ್ಯಾಮರಾದಿಂದ ಮಾಲೀಕರ ಮನೆಯವರು ಮತ್ತು ಮಾಲೀಕರು ನಿತಂತರವಾಗಿ ನಿಗಾ ವಹಿಸಿರುತ್ತಾರೆ. ಯಾರಾದರೂ ಹಣ ಕೊಡದಿದ್ದರೆ, ಅವರು ಹಣ ಕೊಟ್ಟಿಲ್ಲ ನೋಡು ಎಂದು ನಮಗೆ ತಿಳಿಸುತ್ತಾರೆ” ಎಂದು ವಿವರಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ