Breaking News

ಸ್ತಿಗಾಗಿ ತಂದೆಯ‌ ಕಣ್ಣು ಕಿತ್ತ ಮಗ

Spread the love

ಬೆಂಗಳೂರು: ಆಸ್ತಿಗಾಗಿ ಹೆತ್ತ ತಂದೆಯ ಕಣ್ಣುಗಳನ್ನೇ ಕಿತ್ತು ಹಾಕಿದ್ದ ಮಗನಿಗೆ ಇಲ್ಲಿನ ಕೋರ್ಟ್ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ.

ದಂಡ ವಿಧಿಸಿ ತೀರ್ಪು ನೀಡಿತು. 44 ವರ್ಷದ ಅಭಿಷೇಕ್ ಶಿಕ್ಷೆಗೊಳಗಾದ ಅಪರಾಧಿ. ಬನಶಂಕರಿ ಶಾಕಾಂಬರಿ ನಗರದಲ್ಲಿ ಅಪರಾಧಿಯ ತಂದೆ ಪರಮೇಶ್ವರ್ (66) ವಾಸವಾಗಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಭಿಷೇಕ್ ಕೊಲೆ ಯತ್ನ ನಡೆಸಿದ್ದ.‌ 2018ರ ಅಕ್ಟೋಬರ್​ನಲ್ಲಿ‌ ಈ ಘಟನೆ ನಡೆದಿತ್ತು‌.‌

ಜೆ.ಪಿ.ನಗರ ಪೊಲೀಸರು ಅಭಿಷೇಕ್‌ನನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಅಪರಾಧವೆಸಗಿರುವುದು ಸಾಬೀತಾಗಿದ್ದು ಇದೀಗ ಕೋರ್ಟ್ ದಂಡ ಸಮೇತ ಶಿಕ್ಷೆ ಪ್ರಕಟಿಸಿದೆ. ದಂಡ ಕಟ್ಟಲು ವಿಫಲನಾದರೆ ಒಂದು ವರ್ಷ ಕಠಿಣ ಶಿಕ್ಷೆ ವಿಧಿಸಬೇಕು.‌ ದಂಡ‌ದ ಮೊತ್ತವನ್ನು ಪ್ರಕರಣದ ಸಂತ್ರಸ್ತ ಪರಮೇಶ್ವರ್​ ಅವರಿಗೆ‌ ನೀಡಬೇಕು ಎಂದು ನ್ಯಾ. ಗೋವಿಂದಯ್ಯ ಆದೇಶ ನೀಡಿದ್ದಾರೆ.

ಅಪರಾಧಿ ಅಭಿಷೇಕ್‌ ಕೃತ್ಯವೆಸಗಿದ ಬಳಿಕ ಪರಾರಿಯಾಗಿದ್ದ.‌ ಜೆ.ಪಿ. ನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳಹಿಸಿದ್ದರು‌. ಬಳಿಕ ಜಾಮೀನಿನ ಮೇರೆಗೆ ಹೊರಬಂದಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.‌ ಕೋರ್ಟ್ ಸೂಚನೆ ಮೇರೆಗೆ ಆತನನ್ನು ಮತ್ತೆ ಬಂಧಿಸಲಾಗಿತ್ತು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ