Breaking News

ಬ್ಯಾಡ್ ಮ್ಯಾನರ್ಸ್’ ಸಿನಿಮಾ ಪ್ರಚಾರಾರ್ಥವಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿರೋದು ಖುಷಿ: ಅಭಿಷೇಕ್ ಅಂಬರೀಶ್​

Spread the love

ಬೆಳಗಾವಿ: ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಪ್ರಚಾರಾರ್ಥವಾಗಿ ಉತ್ತರ ಕರ್ನಾಟಕಕ್ಕೆ ಭೇಟಿ ಕೊಟ್ಟಿರೋದು ಖುಷಿ ವಿಚಾರ.

ಇದೇ 24ಕ್ಕೆ ಬ್ಯಾಡ್ ಮ್ಯಾನರ್ಸ್ ಬಿಡುಗಡೆ ಆಗುತ್ತಿದ್ದು, ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ನಟ ಅಭಿಷೇಕ್ ಅಂಬರೀಶ್​ ಕೋರಿದರು.

ಬೆಳಗಾವಿ ಖಾಸಗಿ ಹೊಟೇಲ್​​ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ಬ್ಯಾಡ್ ಮ್ಯಾನರ್ಸ್​​ನಲ್ಲಿ ಬೆಳಗಾವಿ ಜಿಲ್ಲೆಯವರು ಅಭಿನಯಿಸಿದ್ದಾರೆ. ಕಲಾವಿದರು ಇಲ್ಲಿಗೆ ಬರೋದಿಲ್ಲ ಎಂಬ ದೂರು ಇದೆ. ಹೀಗಾಗಿ ಬೆಳಗಾವಿಗೆ ಬಂದು ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಿನಿಮಾಗೆ ಒಂದೊಳ್ಳೆ ಕಂಟೆಂಟ್​ ಮುಖ್ಯ: ಇದು ರೂಟಿನ್ ಸಿನಿಮಾ ಅಂತೂ ಅಲ್ಲ, ಒಂದು ವಿಶೇಷ ಚಿತ್ರವಿದು.‌ ಬೆಂಗಳೂರು, ಮೈಸೂರು, ಕನಕಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಶೂಟಿಂಗ್ ನಡೆಸಿದ್ದೇವೆ. ಸಿನಿಮಾ ಶೀರ್ಷಿಕೆ “ಬ್ಯಾಡ್ ಮ್ಯಾನರ್ಸ್” ಎಂದಿದೆ. ನಾವೆಲ್ಲಾ ಬ್ಯಾಡ್​ ಆಗೋಕೇನೆ ಬಂದಿದ್ದೇವೆ. ಎಲ್ಲರಿಗೂ ಈ ಸಿನಿಮಾ ಅರ್ಥ ಆಗಲಿದೆ, ಹಿಡಿಸಲಿದೆ. ನಾವು ರೀಮೇಕ್​ ಮಾಡೋದಿಲ್ಲ, ನಮ್ಮ ಸಿನಿಮಾವನ್ನು ಬೇರೆಯವರು ಡಬ್ಬಿಂಗ್​ಗೆ ತೆಗೆದುಕೊಳ್ಳುತ್ತಿದ್ದಾರೆ‌. ಸಿನಿಮಾ ಸೂಪರ್ ಹಿಟ್ ಆಗಬೇಕು ಅನ್ನೋದು ಎಲ್ಲರ ಆಸೆ. ಸಿನಿಮಾಗೆ ಬಜೆಟ್ ಮುಖ್ಯ ಅಲ್ಲ. ಕಥೆ ಮತ್ತು ಕಂಟೆಂಟ್ ಅಷ್ಟೇ ಮುಖ್ಯ. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ನೋಡಿ, ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.

ದರ್ಶನ್​​ ಅಭಿಷೇಕ್ ಸಿನಿಮಾ: ನಟ ದರ್ಶನ್ ಮತ್ತು ನಿಮ್ಮ ಕಾಂಬಿನೇಷನ್​​ನಲ್ಲಿ ಸಿನಿಮಾ ಬರುತ್ತಾ? ಎಂಬ‌ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಕಥೆ ಬಂದರೆ ನಾನೇ ಕೈ ಕಾಲು ಹಿಡಿದು ಅವರನ್ನು ಒಪ್ಪಿಸುತ್ತೇನೆ. ಅಂತಹ ಕಥೆ ಬಂದರೆ ಖಂಡಿತ ನಾನು ಸಿನಿಮಾ ಮಾಡುತ್ತೇನೆ ಎಂದು ತಿಳಿಸಿದರು. ಇನ್ನೂ, ಎಲ್ಲಿ ಪ್ರೀತಿ ಇರುತ್ತೋ ನಾವು ಅಲ್ಲಿಗೆ ಬರುತ್ತೇವೆ. ಅಂಬರೀಷ್ ಹೆಸರು ಎಲ್ಲೆಲ್ಲಿ ಇದೆಯೋ ಅಲ್ಲಿಗೆ ಹೋಗುತ್ತೇವೆ ಎಂದು ತಿಳಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ