Breaking News

ಜಮೀರ್ ಹೇಳಿಕೆ ಖಂಡನೀಯ, ಇಂಥ ತಪ್ಪಾಗದಂತೆ ಎಚ್ಚರಿಕೆ ವಹಿಸಲಿ: ವಿಜಯೇಂದ್ರ

Spread the love

ಬೆಂಗಳೂರು: “ಜಮೀರ್ ಅಹಮದ್ ಯಾವುದೋ ಒಂದು ಸಮುದಾಯದ ಜವಾಬ್ದಾರಿ ತಗೊಂಡಿಲ್ಲ.

ನೀವು ನಿಮ್ಮ ಅಂತರಾಳದ ಮಾತು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಇನ್ನು ಮುಂದೆ ಈ ರೀತಿ ಮಾತಾಡದಂತೆ ಎಚ್ಚರಿಕೆ ವಹಿಸಿ” ಎಂದು ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

ಜಮೀರ್ ಅಹಮ್ಮದ್ ಅವರು ತೆಲಂಗಾಣ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಕುರಿತು ಶಿವಾನಂದ ವೃತ್ತದಲ್ಲಿರುವ ಅಪಾರ್ಟ್​ಮೆಂಟ್​​ನಲ್ಲಿ ಶುಕ್ರವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, “ಜಮೀರ್ ಅಹಮದ್ ಅವರ ಬಾಯಲ್ಲಿ ಇಂಥ ಮಾತು ದುರದೃಷ್ಟಕರ ಹಾಗೂ ಖಂಡನೀಯ. ಸಭಾಧ್ಯಕ್ಷರ ಪೀಠಕ್ಕೆ ಶಾಸಕರು ಗೌರವ ಕೊಡುವುದೇ ವಿನಃ ಯಾವುದೋ ವ್ಯಕ್ತಿಗಲ್ಲ. ಇನ್ಮುಂದಾದರೂ ಈ ರೀತಿ ಮಾತಾಡುವಾಗ ಎಚ್ಚರಿಕೆ ಇರಲಿ” ಎಂದರು.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ