Breaking News

ಆಹಾರ ಉದ್ಯಮಗಳ ಮೇಲೆ ಐಟಿ ದಾಳಿ

Spread the love

ಬೆಂಗಳೂರು: ಜ್ಯುವೆಲ್ಲರಿ‌ ಅಂಗಡಿ ಮಾಲೀಕರು, ಗುತ್ತಿಗೆದಾರರ ಮನೆ-ಕಚೇರಿಗಳ‌ ಮೇಲೆ‌ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿತ್ತು.

ಇಂದು ಆಹಾರ ಉದ್ಯಮಗಳ‌ ಮೇಲೆ ದಾಳಿ‌ ನಡೆಸಿ‌, ಕಡತಗಳ ಪರಿಶೀಲನೆ ನಡೆಸುತ್ತಿದೆ.

ರಾಜಾಜಿನಗರದ ಇಂಡಸ್ಟ್ರಿಯಲ್‌ ಎಸ್ಟೇಟ್ ಬಳಿಯಿರುವ ಪಿ.ಎಸ್.ಆಗ್ರೋ ಫುಡ್ ಎಲ್​ಎಲ್​ಪಿ ಕಾರ್ಖಾನೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿರುವ ಮಾಣಿಕ್ ಮೇವಾ ಸ್ಟೋರ್ ಮೇಲೆ ದಾಳಿ ನಡೆದಿದೆ. ಈ ಎರಡು ಆಹಾರ ಕಂಪನಿಗಳು ಒಣ ಹಣ್ಣುಗಳ ವ್ಯಾಪಾರ ನಡೆಸುತ್ತಿವೆ‌. ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸದ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ ಸುಮಾರು 10ಕ್ಕೂ ಹೆಚ್ಚು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ