Breaking News

ನಾನು ಭ್ರಷ್ಟನಲ್ಲ‌, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆದ ಸರ್ಕಾರಿ ಅಧಿಕಾರಿ

Spread the love

ನವೆಂಬರ್ 7: ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ‌ ಎಂದು ಬೋರ್ಡ್ ಹಾಕಿಕೊಂಡ ಸರ್ಕಾರಿ ಅಧಿಕಾರಿಯೊಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಎಲ್ಲೆಡೆ ಲಂಚ, 30 %, 40 % , 45 % ಲಂಚ, ಕಮೀಷನ್ (Corruption)​​​ ಎಂಬ ಆರೋಪ-ಪ್ರತ್ಯಾರೋಪಗಳೇ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಮತ್ತು ಅನಾದಿ ಕಾಲದಿಂದಲೂ ಸರ್ಕಾರಿ ಕಛೇರಿಗಳಲ್ಲಿ ಲಂಚ (Bribe) ಇಲ್ಲದೆ ಏನೂ ಕೆಲಸ ಆಗಲ್ಲ, ಒಂದೇ ಒಂದು ಕಡತ ಅಲುಗಾಡಲ್ಲ ಎನ್ನೋ ನೋವು ಜನರಲ್ಲಿ ಬೇರೂರಿದೆ.

ಈ ಲಂಚಾಸುರಗಳ ಹಾವಳಿಯ ಮಧ್ಯೆ ಹಾಸನದ ಬಿಇಒ ಕಛೇರಿಯ ಅಧೀಕ್ಷಕ ಡಿಎಸ್ ಲೋಕೇಶ್ (Hasan BEO Superintendent) ಅವರು ತಮ್ಮ ಟೇಬಲ್ ಮೇಲೆ ನಾನು ಭ್ರಷ್ಟನಲ್ಲ‌, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ (Honesty) ಮೆರೆಯುತ್ತಿದ್ದಾರೆ.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ