Breaking News

ನೈರುತ್ಯ ರೈಲ್ವೆ ಆದಾಯದಲ್ಲಿ ಗಣನೀಯ ಏರಿಕೆ

Spread the love

ಹುಬ್ಬಳ್ಳಿ : ನೈರುತ್ಯ ರೈಲ್ವೆ ಇಲಾಖೆಯು ಆದಾಯದಲ್ಲಿ ಅತ್ಯುತ್ತಮ ಬೆಳವಣಿಗೆ ದಾಖಲಿಸಿದೆ. ಈ ವಲಯವು 2023 ರ ಏಪ್ರಿಲ್​ನಿಂದ ಅಕ್ಟೋಬರ್ ಅವಧಿಯಲ್ಲಿ ಶೇ. 10.44% ಹೆಚ್ಚಳದೊಂದಿಗೆ ಒಟ್ಟು 4288.27 ಕೋಟಿ ರೂ.ಗಳ ಆದಾಯವನ್ನು (ಹಂಚಿಕೆ) ಗಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ 3882.93 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ನೈರುತ್ಯ ರೈಲ್ವೆಯ ಮೂಲ ಪ್ರಯಾಣಿಕರ ಆದಾಯವು 2023 ರ ಏಪ್ರಿಲ್​ನಿಂದ ಅಕ್ಟೋಬರ್ ಅವಧಿಯಲ್ಲಿ 1801.68 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯ 1563.97 ಕೋಟಿ ರೂ.ಗೆ ಹೋಲಿಸಿದರೆ ಶೇ. 15.20% ಹೆಚ್ಚಳವಾಗಿದೆ.

ನೈರುತ್ಯ ರೈಲ್ವೆಯು 2023 ರ ಏಪ್ರಿಲ್​ನಿಂದ ಅಕ್ಟೋಬರ್ ಅವಧಿಯಲ್ಲಿ 27.49 ಮೆಟ್ರಿಕ್ ಟನ್ ಸರಕುಗಳನ್ನು ಲೋಡ್ ಮಾಡುವ ಮೂಲಕ ಶೇ. 11.66% ಹೆಚ್ಚಳದೊಂದಿಗೆ 2741.40 ಕೋಟಿ ರೂ.ಗಳ ಮೂಲ ಸರಕು ಆದಾಯವನ್ನು ಗಳಿಸಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ 2455.14 ಕೋಟಿ ರೂಪಾಯಿ ಗಳಿಸಿತ್ತು

.ವಿಭಾಗಗಳ ಬಿಸಿನೆಸ್ ಡೆವಲಪ್ಮೆಂಟ್ ಯೂನಿಟ್​ಗಳ ಅವಿರತ ಪ್ರಯತ್ನದಿಂದಾಗಿ ಸಮರ್ಪಕವಾದ ಅಸೆಟ್ ಮ್ಯಾನೇಜ್ಮೆಂಟ್ ವ್ಯವಸ್ಥೆಯ ಮೂಲಕ ಸಮಯೋಚಿತ ವ್ಯಾಗನ್ ಪೂರೈಕೆ ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣಾ ಸಿಬ್ಬಂದಿಯ ಅಪಾರ ಪ್ರಯತ್ನದ ಫಲವಾಗಿ ಸರಕು ಸಾಗಣೆ ಬೆಳವಣಿಗೆಯಲ್ಲಿ ಪ್ರಗತಿ ಕಂಡುಬರಲು ಸಾಧ್ಯವಾಗಿದೆ. ನೈಋತ್ಯ ರೈಲ್ವೆ ಮಾರ್ಗಗಳ ದ್ವಿಪಥಿಕರಣ ಹಾಗೂ ವಿದ್ಯುದ್ದೀಕರಣವು ಸರಕು ರೈಲುಗಳ ಸಾಗಣೆ ಸಮಯವನ್ನು ಕಡಿಮೆ ಮಾಡಲು, ರೈಲುಗಳ ವರ್ಧಿತ ಚಲನಶೀಲತೆ ಮತ್ತು ವಿಶ್ವಾಸಾರ್ಹತೆಗೆ ಕಾರಣವಾಗಿದೆ.


Spread the love

About Laxminews 24x7

Check Also

ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದ ಪ್ರತಿಭಟನಾಕಾರರು!

Spread the loveಮಂಡ್ಯ, ನವೆಂಬರ್ 25: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕಾಡಅಂಕನಹಳ್ಳಿ ಗ್ರಾಮದಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ