Breaking News

ಹೊಸ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯಗೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಮನವಿ

Spread the love

ಗಂಗಾವತಿ(ಕೊಪ್ಪಳ): ವಾಣಿಜ್ಯ ನಗರಿ ಗಂಗಾವತಿಯನ್ನು ಕೇಂದ್ರವನ್ನಾಗಿರಿಸಿಕೊಂಡು ನೂತನ ಕಿಷ್ಕಿಂಧಾ ಜಿಲ್ಲೆ ರಚಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಷ್ಕಿಂಧಾ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಮನವಿ ಸಲ್ಲಿಸಿದರು.

ಹೊಸಪೇಟೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಗವಿಯಪ್ಪ ಅವರ ನಿವಾಸದಲ್ಲಿ ಭೇಟಿಯಾದ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು, ಈ ಬಗ್ಗೆ ಮನವಿ ಸಲ್ಲಿಸಿ ನೂತನ ಜಿಲ್ಲೆಯ ಅಗತ್ಯತೆಯನ್ನು ಸಿಎಂಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ಸುರೇಶ ಸಿಂಗನಾಳ ಮತ್ತು ಸಂತೋಷ್ ಕೇಲೋಜಿ, ಗಂಗಾವತಿ ಮತ್ತು ಕೊಪ್ಪಳದ ನಡುವೆ 60 ಕಿ.ಮೀ ಅಂತರವಿದೆ. ಕಾರಟಗಿ, ಕನಕಗಿರಿ, ತಾವರಗೇರಾ ಭಾಗದ ಜನ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದರೆ 80 ರಿಂದ 90 ಕಿ.ಮೀ ಪ್ರಯಾಣಿಸಬೇಕಾಗಿದೆ. ಹೀಗಾಗಿ ಜನರಿಗೆ ತ್ವರಿತ ಸೇವೆ ಕಲ್ಪಿಸುವ ಉದ್ದೇಶಕ್ಕೆ ಗಂಗಾವತಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದರೆ ಕಾರಟಗಿ, ಕನಕಗಿರಿ, ತಾವರಗೇರಾ ಭಾಗದ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ನೂತನ ಜಿಲ್ಲಾ ವ್ಯಾಪ್ತಿಯಲ್ಲಿ ಕಂಪ್ಲಿ ಮತ್ತು ಸಿಂಧನೂರು ತಾಲೂಕುಗಳನ್ನು ಒಳಗೊಂಡಂತೆ ನೂತನ ಜಿಲ್ಲೆ ರಚಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.ವಕೀಲರಾದ ಸೈಯದ್ ಹಾಷ್ಮುದ್ದೀನ್, ಹೆಚ್.ಎಂ. ಮಂಜುನಾಥ, ನಾಗರಾಜ ಗುತ್ತೇದಾರ ಮಾತನಾಡಿ, ಈಗಾಗಲೇ ಗಂಗಾವತಿಗೆ ನ್ಯಾಯಾಲಯದಲ್ಲಿನ ಭೂ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ತಾತ್ಕಾಲಿಕ ಸಹಾಯಕ ಆಯುಕ್ತರ ಕಚೇರಿ ಮಂಜೂರಾಗಿದೆ. ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಗಂಗಾವತಿಗೆ ಪೂರ್ಣ ಪ್ರಮಾಣದ ಸಹಾಯಕ ಆಯುಕ್ತ ಕಚೇರಿ ಮಂಜೂರು ಮಾಡಿಸಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ಬಳಿ ಮನವಿ ಮಾಡಿದರು.


Spread the love

About Laxminews 24x7

Check Also

ಬೆಳಗಾವಿ ವೈದ್ಯನ ಮನೆಯಲ್ಲಿ ಗಾಂಜಾ ಪತ್ತೆ

Spread the loveಬೆಳಗಾವಿ : ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನೇ ಗಾಂಜಾ ಘಮಲೇರಿಸಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ