Breaking News

ಅಂಬಾರಿಯಲ್ಲಿ ಮೈಸೂರು ದಸರಾ ದೀಪಾಲಂಕಾರ ವೀಕ್ಷಿಸಿದ ಸಿಎಂ

Spread the love

ಮೈಸೂರು ದಸರಾ ದೀಪಾಲಂಕಾರ ಕಣ್ತುಂಬಿಕೊಂಡರು.

ಮೈಸೂರು: ನಾಡಹಬ್ಬ ದಸರಾದಲ್ಲಿ ಭಾಗವಹಿಸಲು 3 ದಿನಗಳ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಏರ್ ಶೋ ವೀಕ್ಷಣೆ ಮಾಡಿದ ಬಳಿಕ, ಅಂಬಾರಿ ಬಸ್​ನಲ್ಲಿ ಜನರಿಗೆ ಕೈ ಬೀಸುತ್ತಾ ದಸರಾ ದೀಪಾಲಂಕಾರ ವೀಕ್ಷಿಸಿದರು.

 

 ಅಂಬಾರಿಯಲ್ಲಿ ಮೈಸೂರು ದಸರಾ ದೀಪಾಲಂಕಾರ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯಸೋಮವಾರ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಏರ್​ ಶೋ ವೀಕ್ಷಣೆ ಮಾಡಿದ ಬಳಿಕ ಸಂಜೆ ಅರಮನೆಯ ಮುಂಭಾಗದ ಬಸವೇಶ್ವರ ವೃತ್ತದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಬಸ್​ನ ಮೇಲ್ಭಾಗದಲ್ಲಿ ಕುಳಿತು ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ಈ ವೇಳೆ ದೀಪಾಲಂಕಾರ ನೋಡಲು ಬಂದಿದ್ದ ಜನರಿಗೆ ಕೈ ಬೀಸುತ್ತಾ ಸಾಗಿದರು. ಸಿಎಂ ಸಿದ್ದರಾಮಯ್ಯಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಾಥ್ ನೀಡಿದರು.

 ದಸರಾ ದೀಪಾಲಂಕಾರ ವೀಕ್ಷಿಸಲು ನೆರೆದಿದ್ದ ಜನರು


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ