Breaking News

ಬಾಗಲಕೋಟೆಯಲ್ಲಿ ಗಮನ ಸೆಳೆದ ಛಪ್ಪನ್ ಭೋಗ್​ ಆಚರಣೆ

Spread the love

ಬಾಗಲಕೋಟೆ : ದಸರಾ ಹಬ್ಬದ ನಿಮಿತ್ತ ನಗರದಲ್ಲಿರುವ ಜಗದಂಬಾ ದೇವಸ್ಥಾನದಲ್ಲಿ ಛಪ್ಪನ್ ಭೋಗ್​ ಎಂಬ ವಿಶೇಷ ಪೂಜೆ ನೆರವೇರಿಸಲಾಯಿತು.

56 ಬಗೆಯ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ದೇವಿಯ ಮುಂದೆ ಇಟ್ಟು ಪೂಜೆ ಸಲ್ಲಿಸಲಾಯಿತು. ಆ ಬಳಿಕ ಎಲ್ಲ ತಿಂಡಿಗಳನ್ನು ಒಂದೆಡೆ ಸೇರಿಸಿ ಪ್ರಸಾದ ವಿತರಣೆ ಮಾಡಲಾಯಿತು. ಯಾವುದೇ ಜಾತಿ, ಮತ, ಪಂಥ ಎನ್ನದೇ ಎಲ್ಲ ತರಹದ ಭಕ್ತರು ತಂದಿರುವ ಪ್ರಸಾದ ವಿತರಿಸುವ ಮೂಲಕ ಗಮನ ಸೆಳೆಯಲಾಯಿತು.

ದಸರಾ ಹಬ್ಬ ಬಂದರೆ ಸಾಕು ದೇವಾಲಯದಲ್ಲಿ ನಿತ್ಯ ಒಂದಿಲ್ಲೊಂದು ಪೂಜೆ, ಪುನಸ್ಕಾರ ಸೇರಿದಂತೆ ವಿಶಿಷ್ಟ ಆಚರಣೆ ಮಾಡುವ ಮೂಲಕ ಗಮನ ಸೆಳೆಯಲಾಗುತ್ತದೆ. ಈ ದೇವಾಲಯವು ಬಾಗಲಕೋಟೆ ನಗರದಲ್ಲಿ ಇದ್ದು, ದಸರಾ ಅಷ್ಟಮಿ ದಿನದಂದು ಛಪ್ಪನ್ ಭೋಗ್​ ಎನ್ನುವ ವಿಶೇಷ ಆಚರಣೆ ಮಾಡಲಾಗುತ್ತದೆ. ಈ ಮೂಲಕ ದೇವಿ ಆರಾಧನೆ ಮಾಡಲಾಗುತ್ತದೆ. ಜೊತೆಗೆ, ಜಗದಂಬಾ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗೆ ಹಲವು ವರ್ಷಗಳಿಂದ ಈ ಆಚರಣೆ ಸಾಂಗೋಪ ಸಾಂಗವಾಗಿ ನಡೆದುಕೊಂಡು ಬಂದಿದೆ.

ಛಪ್ಪನ್ ಭೋಗ್​ ವಿಶೇಷ : ಛಪ್ಪನ್ ಎಂದರೆ 56. ಭೋಗ್​ ಅಂದರೆ ನೈವೇದ್ಯ. 56 ವಿವಿಧ ಬಗೆಯ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ಇಟ್ಟು ಆರತಿ ಮಾಡಲಾಗುತ್ತದೆ. ಹೀಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಿಯನ್ನು ಆರಾಧಿಸಿ. ಜೊತೆಗೆ ಭಕ್ತರಿಂದಲೇ ತಂದಿರುವ ಬಗೆ ಬಗೆಯ ತಿಂಡಿ ತಿನ್ನಿಸುಗಳನ್ನು ಒಂದೆಡೆ ಸೇರಿಸಿ ಇಡುತ್ತಾರೆ. ಬಳಿಕ ಅದನ್ನು ಪ್ರಸಾದವಾಗಿ ಎಲ್ಲರಿಗೂ ನೀಡಲಾಗುತ್ತದೆ. ಇಂತಹ ಪೂಜೆ ಮಾಡುವುದರಿಂದ ಎಲ್ಲರನ್ನು ದೇವಿ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಇಡುತ್ತಾಳೆ ಎಂಬುದು ಇಲ್ಲಿನ ಭಕ್ತರ ನಂಬಿಕೆ ಆಗಿದೆ.


Spread the love

About Laxminews 24x7

Check Also

ಕರ್ನಾಟಕ ಹವಾಮಾನ ವರದಿ: ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಲಘು ಮಳೆಯ ಸೂಚನೆ

Spread the loveಬೆಂಗಳೂರು: ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇನ್ನು ಕೆಲ ದಿನಗಳಲ್ಲಿ ಬೆಂಗಳೂರು ಬಿಸಿಲಿನ ಬೇಗೆಯಿಂದ ತತ್ತರಿಸಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ