Breaking News

ನಗರಸಭೆ ಆಯುಕ್ತರ ಕುರ್ಚಿಗಾಗಿ ಬಾಗಲಕೋಟೆ ನಗರದಲ್ಲಿ ಗೊಂದಲ 2ರು ಒಂದೇ ಚೇಂಬರ್​ನಲ್ಲಿ ಕುಳಿತು ಆಡಳಿತ

Spread the love

ಬಾಗಲಕೋಟೆ : ನಗರಸಭೆ ಆಯುಕ್ತರ ಕುರ್ಚಿಗಾಗಿ ಬಾಗಲಕೋಟೆ ನಗರದಲ್ಲಿ ಗೊಂದಲ ಮುಂದುವರೆದಿದೆ. ಇತ್ತೀಚೆಗಷ್ಟೇ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಗೊಂದಲ ಮಾಡಿಕೊಂಡಿದ್ದರು.

ಅದು ಮಾಸುವ ಮುಂಚೆ ಈಗ ನಗರಸಭೆ ಆಯುಕ್ತರ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಮಧ್ಯೆ ಪೈಪೋಟಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಹಿಂದಿನ ಆಯುಕ್ತ ಹಾಗೂ ಹಾಲಿ ಆಯುಕ್ತರ ಮಧ್ಯೆ ಕುರ್ಚಿಗಾಗಿ ಸ್ಪರ್ಧೆ ಏರ್ಪಟ್ಟಿದ್ದು, ಒಂದೇ ಚೇಂಬರ್​ನಲ್ಲಿ ಕುಳಿತ ಇಬ್ಬರೂ ಆಯುಕ್ತರು, ಆಡಳಿತ ನಡೆಸಲು ಮುಂದಾಗಿದ್ದಾರೆ.

ಹಿಂದಿನ ನಗರಸಭೆ ಆಯುಕ್ತ ಆರ್ ವಾಸನ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು. ಹೊಸದಾಗಿ ರಮೇಶ್ ಜಾಧವ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ, ರಮೇಶ್ ಜಾಧವ್​ ಮತ್ತು ಆರ್. ವಾಸನ್ ನಡುವೆ ಕುರ್ಚಿಗಾಗಿ ಸ್ಪರ್ಧೆ ನಡೆಯುತ್ತಿದೆ.

ಆರ್ ವಾಸನ್

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ವರ್ಗಾವಣೆಯಾಗಿದ್ದ ಆರ್ ವಾಸನ್, ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಸರ್ಕಾರಿ ಆದೇಶದಿಂದ ಬಾಗಲಕೋಟೆ ನಗರಸಭಾ ಆಯುಕ್ತರ ಹುದ್ದೆಗೆ ರಮೇಶ್ ಜಾಧವ್ ಅವರನ್ನು ನಿಯುಕ್ತಿಗೊಳಿಸಲಾಗಿತ್ತು. ಆಗಸ್ಟ್​ 12 ರಂದು ಆರ್ ವಾಸನ್ ಅವರ ವರ್ಗಾವಣೆಯಾಗಿತ್ತು. ಸರ್ಕಾರದ ಆದೇಶ ತಂದು ಹುದ್ದೆ ಅಲಂಕರಿಸಿದ್ದೇನೆ ಎಂದು ಆಯುಕ್ತ ರಮೇಶ್ ಜಾಧವ್ ತಿಳಿಸಿದ್ದಾರೆ.

ಮತ್ತೊಂದೆಡೆ ಕೆಎಟಿಯಿಂದ ಆದೇಶ ತಗೊಂಡು ಬಂದಿರುವೆ ಎಂದು ಹಿಂದಿ‌ನ ನಗರಸಭಾ ಆಯುಕ್ತ ಆರ್ ವಾಸನ್ ತಿಳಿಸಿದ್ದಾರೆ. ಇಬ್ಬರ ಅಧಿಕಾರಿಗಳಿಂದ ಯಾರ ಆದೇಶ ಪಾಲಿಸಬೇಕು ಎಂದು ಇತರ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದಾರೆ. ನಂತರ ಕೆಎಟಿ ಕಾನೂನು ಆದೇಶ ಪಾಲಿಸುವುದಾಗಿ ಜಾಧವ್ ಮಾಹಿತಿ ನೀಡಿ, ಆಯುಕ್ತ ಕಚೇರಿಯಿಂದ ಹೂರಗೆ ಹೋದರು.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ