ಬೆಂಗಳೂರು : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಳ್ಳೆಯ ಆಡಳಿತ ಕೊಡಬೇಕು ಅಂತಿದ್ದಾರೆ. ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ ಮಾಡಬೇಕು, ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಮಾಜಿ ಸಿಎಂ ಹಾಗೂ ಸಂಸದ ಸದಾನಂದಗೌಡ ಕಿಡಿಕಾರಿದರು.
ನನ್ನ ಸಂಪರ್ಕದಲ್ಲಿ ಅನೇಕರು ಇದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ಮಾಡಬೇಕು ಅಂದ್ರೆ ಆ ಕೆಲಸ ಮಾಡಬೇಕು. ಆಡಳಿತ ಮಾಡುವುದು ಬಿಟ್ಟು, ಎಲ್ಲವನ್ನೂ ಡಿ ಕೆ ಶಿವಕುಮಾರ್ ಮಾಡ್ತಿದ್ದಾರೆ, ಆಪರೇಷನ್ ಮಾಡೋದು ಬಿಟ್ಟು, ಸಮರ್ಥ ಆಡಳಿತ ಮಾಡಲಿ ಎಂದು ಸದಾನಂದ ಗೌಡ ಅವರು ಕುಟುಕಿದರು.
CWRC ಸಭೆಯಲ್ಲಿ ಮತ್ತೆ ನೀರು ಬಿಡುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೆ ವಾದ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಟ್ರಿಬ್ಯೂನಲ್ ಪ್ರಕಾರ ಇಷ್ಟು ನೀರು ಬಿಡಬೇಕು ಅಂತ ಅವರ ವಾದ. ಆದರೆ, ನಮ್ಮಲ್ಲಿ ಮಳೆ ಇಲ್ಲ, ನೀರಿಲ್ಲ ಅನ್ನೋದು ಸಮಸ್ಯೆ. ಕಾಂಗ್ರೆಸ್ ಅವರು ವಿದ್ಯುತ್ ಸಮಸ್ಯೆ ಅಂತಾರೆ, ಅದನ್ನ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಸಚಿವರೇ ಇದಕ್ಕೆ ಹೊಣೆ. ಮಳೆ ಇಲ್ಲದಾಗ ರೈತರ ಹಿತಾಸಕ್ತಿ ಕಾಪಾಡಿಕೊಳ್ಳಬೇಕಿತ್ತು.ಆದರೆ, ರೈತರ ನಷ್ಟ ಪರಿಹಾರ ಕೊಡುವ ಬಗ್ಗೆಯೂ ಚರ್ಚೆ ಮಾಡಿಲ್ಲ.ಕೇಂದ್ರ ಬರ ಅಧ್ಯಯನ ಮಾಡಲು ಬಂಧ ಅಧಿಕಾರಿಗಳ ಬಳಿಯೂ ವಿಚಾರ ಸರಿಯಾಗಿ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.
ಅನುದಾನ ಹಿಂಪಡೆದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ದ್ವೇಶಷ ರಾಜಕಾರಣ ಅಂತ ಹೇಳ್ತಾರೆ. ಅನುದಾನ ಕೊಡದೆ ಆ ಕ್ಷೇತ್ರದ ಶಾಸಕನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾರೆ. ಜನ ದಡ್ಡರಲ್ಲ, ಅವರಿಗೂ ಎಲ್ಲಾ ವಿಚಾರ ಗೊತ್ತಾಗಲಿದೆ. ಹಿಂದಿನ ಸರ್ಕಾರ ಕೊಟ್ಟಿದೆ, ಇವರು ಕೊಡುವುದು ಬೇಡ. ಹಿಂದೆ ಅನುದಾನ ಕೊಟ್ಟಾಗ ಅದರ ಕಾಮಗಾರಿ ಆರಂಭವಾಗಿರುತ್ತೆ.ಇದು ಕಮೀಷನ್ ಹೆಚ್ಚು ಮಾಡುವ ಹುನ್ನಾರ ಅಂತ ನನಗೆ ಅನಿಸುತ್ತಿದೆ.
ಮಾಗಡಿ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಮುನಿರತ್ನ ಅವರಿಗೆ ಮಾಡಿದ್ದು ಅದೇ ಅಲ್ವೇ.? ಅವರು ಹೇಳುವ ಮೊದಲೇ ಮುನಿರತ್ನಗೆ ಮಾಡಿದ್ದು ಅದನ್ನೆ. ಎಲ್ಲಾ ಮಾಡಿದ ಮೇಲೆ, ಇವರು ಹೇಳಿದ್ದಾರೆ ಎಂದರು.
ಮೊದಲನೆಯಾದಾಗಿ NEP ಎಲ್ಲಾ ರೀತಿಯ, ಎಲ್ಲಾ ರಾಜ್ಯದ ಎಕ್ಸ್‌ಪರ್ಟ್ ಮೂಲಕ ರಚನೆಯಾಗಿದೆ. ಆಯಾ ದೇಶಕ್ಕೆ ಸಂಬಂಧಿಸಿದಂತೆ, ಪ್ರಾದೇಶಿಕ ಭಾಷೆಗೆ ಒತ್ತು ಇರಲಿಲ್ಲ, ಪ್ರಾದೇಶಿಕ ಭಾಷೆಗೆ ಪ್ರಧಾನಿ ಒತ್ತು ಕೊಡಬೇಕು ಅಂತ ನಿರ್ಧರಿಸಿದರು. ಎಲ್ಲಾ ಭಾಷೆ, ಸಂಸ್ಕೃತಿ ಬೆಸೆಯುವ ಕೆಲಸ ಮಾಡಿತು, ಈ ದೇಶದ ಎಲ್ಲಾ ವಿಚಾರ ಇಟ್ಟುಕೊಂಡು ಭಾರತದ ವ್ಯವಸ್ಥೆ ಇಟ್ಟುಕೊಂಡು ಹೋಗುತ್ತಾರೆ. NEP ರದ್ದು ಮಾಡಿ SEP ಮಾಡಿರೋದ ಸರಿಯಲ್ಲ. ಕಾಂಗ್ರೆಸ್ ಅವರ ವಿಚಾರ ನಮಗೆ ಗೊತ್ತಿದೆ, ಅವರಿಗೆ ತಜ್ಞರು ಎನಿಸಿದವರ ನೇಮಕ ಮಾಡುತ್ತಾರೆ. ದೇಶಕ್ಕೆ ಒಂದು ಎಜುಕೇಶನ್ ಪಾಲಿಸಿ ಇರಬೇಕು ಎಂದು ಹೇಳಿದರು.