Breaking News

ಸಭಾಪತಿ ಹೊರಟ್ಟಿ ಪತ್ನಿಗೆ ಮೋಸ-ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ಗೆ ಗ್ರಾಹಕರ ಆಯೋಗ ಖಡಕ್ ಸೂಚನೆ

Spread the love

ಧಾರವಾಡ: ಹುಬ್ಬಳ್ಳಿಯ ಪಿಂಟೋ ರಸ್ತೆ ನಿವಾಸಿಯಾದ ಹೇಮಲತಾ ಬ. ಹೊರಟ್ಟಿಯವರು ಅಲ್ಲಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನವರು ಆರಂಭಿಸಿದ ಆದಿತ್ಯ ಗೋಲ್ಡ್ ಪರ್ಚೇಸ್ ಸ್ಕಿಮ್‌ಗೆ ಸದಸ್ಯರಾಗಿದ್ದರು.

ನಿಯಮದಂತೆ ಪ್ರತಿ ತಿಂಗಳು 10,000 ರೂಪಾಯಿಗಳಂತೆ ಅವರು ಒಟ್ಟು 19 ಕಂತಿನ 1,90,000 ರೂಪಾಯಿಗಳನ್ನು ಕಟ್ಟಿದ್ದರು. 19 ಕಂತಿನ ಹಣ ಕಟ್ಟಿದ ಮೇಲೆ ಸದಸ್ಯರಿಗೆ 53.168 ಗ್ರಾಂ ತೂಕದ ಚಿನ್ನ ಕೊಡುವ ಕರಾರು ಇತ್ತು. ಪೂರ್ತಿ ಹಣ ಕಟ್ಟಿ ಯೋಜನಾ ಅವಧಿ ಮುಕ್ತಾಯವಾದರೂ ನಿಯಮಾನುಸಾರ ತನಗೆ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನವರು 53.168 ಗ್ರಾಂ ತೂಕದ ಚಿನ್ನ ಕೊಡದೇ ಸತಾಯಿಸುತ್ತಿದ್ದಾರೆ. ಕಾರಣ ಅವರಿಂದ ಗ್ರಾಹಕಳಾದ ತನಗೆ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಹುಬ್ಬಳ್ಳಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರಳಾದ ಹೇಮಲತಾ ಬ. ಹೊರಟ್ಟಿಯವರು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದ24.03.2023 ರಂದು ಈ ದೂರನ್ನು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷೀ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಪೂರ್ತಿ 1,90,000 ಹಣ ಪಡೆದ ಮೇಲೆ ಅದಕ್ಕೆ ಸಮಾನಾಂತರ ಮೌಲ್ಯದ ಶುದ್ಧ ಬಂಗಾರವನ್ನು ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನವರು ತನ್ನ ಗ್ರಾಹಕರಾದ ದೂರುದಾರಳಿಗೆ ಕೊಡಬೇಕಾಗಿತ್ತು. ಆ ಚಿನ್ನ ಕೊಡುವ ಬದಲು 2014ನೇ ಇಸವಿಯಲ್ಲಿ ದೂರುದಾರರು ಮತ್ತು ಅವರ ಗಂಡ ಸೇರಿ 530 ಗ್ರಾಂ ಚಿನ್ನ ತಮ್ಮಿಂದ ಪಡೆದಿದ್ದು ಆ ಹಣದ ಪಾವತಿಗಾಗಿ ಈ ಸ್ಟೀಮಿನ ಹಣ 1,90,000 ರೂಪಾಯಿಯನ್ನು ದೂರುದಾರರು 2019ನೇ ಇಸವಿಯಲ್ಲಿ ಕಟ್ಟಿದ್ದಾರೆ ಕಾರಣ ಅವರಿಗೆ 53.168 ಗ್ರಾಂ ತೂಕದ ಚಿನ್ನ ಕೊಡುವ ಪ್ರಮೆಯ ಬರುವುದಿಲ್ಲ ಆದ್ದರಿಂದ ಅವರ ದೂರನ್ನು ವಜಾ ಮಾಡಬೇಕು ಅಂತಾ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ನವರು ಆಕ್ಷೇಪಣೆ ಎತ್ತಿದ್ದರು. 2014ನೇ ಇಸವಿಯಲ್ಲಿ ದೂರುದಾರಳಿಗೆ 530 ತೂಕದ ಚಿನ್ನ ಕೊಟ್ಟಿದ್ದರೇ ಆ ಹಣವನ್ನು 2023ನೇ ಇಸವಿವರೆಗೆ ದೂರುದಾರ ಅಥವಾ ಅವರ ಗಂಡನಿಂದ ಪಡೆಯುವ ಬಗ್ಗೆ ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‌ವರು ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ ಅವರ ಆಕ್ಷೇಪಣೆ ಸ್ವೀಕರಿಸಲು ಅರ್ಹರಾಗಿಲ್ಲ ಅಂತಾ ಆಯೋಗ ಅಭಿಪ್ರಾಯಪಟ್ಟು ಅವರ ಆಕ್ಷೇಪಣೆಯನ್ನು ತಳ್ಳಿಹಾಕಿ ತೀರ್ಪು ನೀಡಿದೆ. ಸ್ಟೀಮಿನ ಹಣ 1,90,000 ರೂಪಾಯಿ ಮೊತ್ತದ ಚಿನ್ನ ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ತೀರ್ಪಿನಲ್ಲಿ ಆಯೋಗ ಹೇಳಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ 1,90,000 ಕಿಮ್ಮತ್ತಿಗೆ ಸಮಾನವಾದ ಆಗಿನ 53.168 ಗ್ರಾಂ ತೂಕದ ಚಿನ್ನವನ್ನು ದೂರುದಾರಳಾದ ಹೇಮಲತಾ ಹೊರಟ್ಟಿರವರಿಗೆ ನೀಡುವಂತೆ ಆದೇಶಿಸಿದೆ.

ದೂರುದಾರಳಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ 25,000 ಪರಿಹಾರ ಹಾಗೂ 10,000 ಪ್ರಕರಣದ ಖರ್ಚು ವೆಚ್ಚ ನೀಡಲು ಆಯೋಗ ಆದೇಶಿಸಿದೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ