ಬೆಳಗಾವಿಯನ್ನು ಎರಡನೇ ರಾಜಧಾನಿ ಸ್ಮಾರ್ಟ ಸಿಟಿ ಕುಂದಾನಗರಿ ಹಂಗೆ ಹಿಂಗೇ ಅಂತಾ ವರ್ಣಿಸುತ್ತಾರೆ ಆದರೆ ನಗರದಲ್ಲಿ ಕೆಲವೊಂದಿಷ್ಟು ಬೇಜವಾಬ್ದಾರಿ ಇಲಾಖೆ ಬೇಜವಾಬ್ದಾರಿ ಅಧಿಕಾರಿಗಳು ಬೆಳಗಾವಿಯನ್ನು ಸ್ವಚ್ಛವಾಗಿಡಲು ಸಹಕರಿಸುತ್ತಿಲ್ಲ
ಬೆಳಗಾವಿ ಎಲ್ಲಾ ರಂಗದಲ್ಲೂ ತನ್ನ ಪ್ರಾಮುಖ್ಯತೆಯನ್ನು ಪಡೆದಿದೆ ವೀರ ರಾಣಿ ಕಿತ್ತೂರು ಚನ್ನಮ್ಮಾ ಸಂಗೊಳ್ಳಿ ರಾಯಣ್ಣ ರಂತಹ ದೇಶಭಕ್ತರ ಹುಟ್ಟಿದ ನಾಡಿದು ಬೆಳಗಾವಿ ರಾಜಕಾರಣ ಇಡೀ ರಾಜ್ಯಕ್ಕೆ ಒಂತರಾ ಡಿಫರೆಂಟ್ ಸರ್ಕಾರವನ್ನು ಕಟ್ಟುವುದರ ಜೊತೆಗೆ ಕೆಡುವುದರಲ್ಲಿ ನೈಪುಣ್ಯ ಹೊಂದಿದೆ ಎರಡೆರೆಡು ಸಚಿವರನ್ನು ಹೊಂದಿದ ಬೆಳಗಾವಿ
ಆದರೆ ಶಾಹು ನಗರ ವಂದನ ಕೊಲೊನಿಯಲ್ಲಿ ಎಲ್ಲಿ ನೋಡಿದರಲ್ಲಿ ಗಬ್ಬೆದ್ದು ನಾರುತ್ತಿರುವ ಕೊಳಚೆಗಳು ರಸ್ತೆ ಪಕ್ಕದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಇದನ್ನು ನೋಡಿದ್ರೆ ಮಹಾನಗರ ಪಾಲಿಕೆ ಕಾರ್ಮಿಕರು ಮೇಲಾಧಿಕಾರಿಗಳು ನಿದ್ರೆಗೆ ಜಾರಿದಂತಿದೆ
ಕೂಡಲೇ ಶಾಹು ನಗರ ಹಾಗು ವಂದನ ಕೊಲೊನಿಯಲ್ಲಿ ಮಹಾನಗರ ಪಾಲಿಕೆಯವರು ಸ್ವಚ್ಛತೆ ಗೊಳಿಸುವಂತೆ ಮತ್ತೆ ಮೇಲಾಧಿಕಾರಿಗಳು ಕಾರ್ಮಿಕರಿಗೆ ನಗರವನ್ನು ಸ್ವಚ್ಛವಾಗಿಡುವಂತೆ ತಾಕೀತ್ ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ
ಅದೇ ರೀತಿ ಮನೆಯಲ್ಲಿರುವ ಕಸವನ್ನು ಸ್ಥಳೀಯರು ಪಾಲಿಕೆ ಕಸದ ವಾಹನಕ್ಕೆ ನೀಡಿ ಸ್ವಚ್ಚ ಬೆಳಗಾವಿಗೆ ಕೈ ಜೋಡಿಸಬೇಕೆಂಬುದೇ ಇನ್ ನ್ಯೂಸ್ ಆಶಯವಾಗಿದೆ