Breaking News

ಅರಣ್ಯ ಇಲಾಖೆ ಕಚೇರಿಯಲ್ಲಿದ್ದ ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ ಕಳ್ಳತನ..!

Spread the love

ಯಾದಗಿರಿ, ಅ.06: ಅರಣ್ಯ ಇಲಾಖೆ ಕಚೇರಿಯಲ್ಲಿದ್ದ ಲಕ್ಷ ಮೌಲ್ಯದ ಶ್ರೀಗಂಧದ ಕಟ್ಟಿಗೆ (Sandal Wood) ಕಳ್ಳತನವಾದ ಘಟನೆ ಯಾದಗಿರಿ(Yadagiri) ನಗರದ ಅರಣ್ಯ ಕಚೇರಿಯಲ್ಲಿ ನಡೆದಿದೆ. ಹೌದು, ಕಳೆದ ತಿಂಗಳು ಖದೀಮರು ತಾಲೂಕಿನ ಬಾಲಗಮಡು-ಹಂದರಕಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಗಿಡಗಳನ್ನು ಕಡಿದು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಬರೊಬ್ಬರಿ 8 ಲಕ್ಷ ಮೌಲ್ಯದ 85 ಕೆ.ಜಿ ಕಟ್ಟಿಗೆಗಳನ್ನು ಹಾಗೂ ಕಳ್ಳನನ್ನು ವಶಕ್ಕೆ ಪಡೆದಿದ್ದರು. ಬಳಿಕ ಅದನ್ನು ನಗರದ ಅರಣ್ಯ ಕಚೇರಿಯಲ್ಲಿ ಶೇಖರಿಸಿಡಲಾಗಿತ್ತು. ಆದರೆ, ಇದೀಗ ಕಳೆದ ನಾಲ್ಕು ದಿನಗಳ ಹಿಂದೆಯೇ ಕಚೇರಿಯಲ್ಲಿದ್ದ ಕಟ್ಟಿಗೆಗಳು ಕಳ್ಳತನ ಕಳ್ಳತನವಾಗಿದೆ.

ಕಳ್ಳತನವನ್ನು ಮರೆಮಾಚಲು ಅಧಿಕಾರಿಗಳು ಖತರ್ನಾಕ್​ ಪ್ಯ್ಲಾನ್​ ಮಾಡಿದ್ದು,  ‘ಅರಣ್ಯ ಪ್ರದೇಶದಿಂದ ಮತ್ತೊಂದು ಶ್ರೀಗಂಧದ ಗಿಡ ಕಡಿದು ಮಾಡಿ, ಕಳ್ಳತನವಾಗಿರುವ ಜಾಗದಲ್ಲಿ ಇಡಲಾಗಿತ್ತು. ನಂತರ ಕಳ್ಳತನ ಆಗಿಯೇ ಇಲ್ಲ ಎನ್ನುವ ಹಾಗೆ ತೋರಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದರು. ಇನ್ನು ಕಳ್ಳತನವಾದ ಹಿನ್ನಲೆ ಕಲಬುರ್ಗಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಸುನೀಲ್ ಪನ್ವಾರ್  ಅವರು ‘ಉಪ ವಲಯ ಅರಣ್ಯಾಧಿಕಾರಿ ಚಂದ್ರಶಾ ನೀರಕಟ್ಟಿ ಹಾಗೂ ಗಸ್ತು ವನಪಾಲಕ ರಿಜ್ವಾನ್ ಎಂಬುವವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಕಳ್ಳತನ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ