ಮೈಸೂರು : ಈ ಬಾರಿ ನಾಡಹಬ್ಬ ದಸರಾವನ್ನು ಸಾಂಪ್ರದಾಯಕವಾಗಿ ಆಚರಿಸಲು ನಿರ್ಧಾರಿಸಲಾಗಿದೆ. ಜೊತೆಗೆ ದಸರಾ ಸಂದರ್ಭದಲ್ಲಿ ನಗರದ 135 ಕಿ.
ಮೀ ವ್ಯಾಪ್ತಿಯ ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಸರ್ಕಾರಿ ಪಾರಂಪರಿಕ ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಈ ವೇಳೆ ಪ್ರತಿ ವೃತ್ತದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸೋಮನಾಥೇಶ್ವರ ದೇವಾಲಯ ಹಾಗೂ ಚಂದ್ರಯಾನ 3 ಮಾದರಿಗಳು ದೀಪಾಲಂಕಾರದಲ್ಲಿ ಮಿಂಚಲಿವೆ. ಈ ಬಾರಿಯ ದಸರಾ ದೀಪಾಲಂಕಾರ ಎಲ್ಲೆಲ್ಲಿ ಇರಲಿದೆ, ಎಷ್ಟು ಖರ್ಚಾಗಲಿದೆ ಎಂಬ ಮಾಹಿತಿ ಸ್ಟೋರಿ ಇಲ್ಲಿದೆ.
ಮೈಸೂರು ದಸರಾಕ್ಕೆ ದೀಪಾಲಂಕಾರ ತಯಾರಿಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿಯೂ ದೀಪಾಲಂಕಾರದಿಂದ ಝಗಮಗಿಸಲಿದೆ. ಇಸ್ರೋದ ಚಂದ್ರಯಾನ 3 ಯೋಜನೆಯ ಮಾದರಿಯನ್ನೂ ಕೂಡ ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಯುನೆಸ್ಕೊದಿಂದ ಗುರುತಿಸಲ್ಪಟ್ಟ ಸೋಮನಾಥೇಶ್ವರ ದೇವಾಲಯದ ಮಾದರಿ ಕೂಡ ದಸರಾ ದೀಪಾಲಂಕಾರದಲ್ಲಿ ಮೂಡಿಬರುತ್ತಿರುವುದು ವಿಶೇಷ.