Breaking News

ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ಬಂದ್ ಮಾಡಿ ಪ್ರತಿಭಟಿಸಿದ ರೈತರು

Spread the love

ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ರಸ್ತೆ ಪೂರ್ಣಗೊಳ್ಳುವ ಮುನ್ನ ಟೋಲ್ ವಸೂಲಿ ಮಾಡುವುದನ್ನು ವಿರೋಧಿಸಿ ಇಂದು ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ತಡೆದ ರೈತರು, ಆಕ್ರೋಶ ವ್ಯಕ್ತಪಡಿಸಿದರು.

ಖಾನಾಪುರ ತಾಲೂಕಿನ ಗಣೆಬೈಲ್ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಖಾನಾಪುರ ತಾಲೂಕಿನ ರೈತರಿಗೆ ಟೋಲ್ ವಿನಾಯಿತಿ ನೀಡಬೇಕು‌. ರಸ್ತೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈವರೆಗೆ ನೂರಾರು ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ತಕ್ಷಣ ಎಲ್ಲರಿಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿ ಒಂದು ಗಂಟೆ ಕಾಲ‌ ಹೆದ್ದಾರಿ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, “ಮಾರುಕಟ್ಟೆ ದರದ ಪ್ರಕಾರ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು. ಲೋಕ ಅದಾಲತ್ ಮಾದರಿಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳನ್ನೂ ಒಂದೆಡೆ ಸೇರಿಸಿ ಭೂಮಿ ಕಳೆದುಕೊಂಡ ರೈತರ ಖಾತೆಗಳಿಗೆ ಏಕಕಾಲಕ್ಕೆ ಹಣ ಜಮೆ ಮಾಡಬೇಕು. ಅದೇ ರೀತಿ ಖಾನಾಪುರ ತಾಲೂಕಿನ ಎಲ್ಲ ಜನರಿಗೂ ಟೋಲ್ ಉಚಿತ ಮಾಡಬೇಕು” ಎಂದು ಆಗ್ರಹಿಸಿದರು.

ಭೂಸ್ವಾಧೀನ ಅಧಿಕಾರಿ ಬಲರಾಮ್ ಚವ್ಹಾಣ ಪ್ರತಿಕ್ರಿಯಿಸಿದ್ದು, “2011-12ರಲ್ಲಿ ಅಧಿಸೂಚನೆ ಹೊರಡಿಸಿದ ಪ್ರಕಾರ ಆಗಿನ ದರ ನಿಗದಿಪಡಿಸಲಾಗಿದೆ. ಹಾಗಾಗಿ ಮೊದಲು ಈ ಹಣವನ್ನು ತೆಗೆದುಕೊಳ್ಳಿ. ಆಮೇಲೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಿ. ಅದನ್ನು ಬಿಟ್ಟು ಈಗಿನ ದರವನ್ನೇ ಕೊಡುವಂತೆ ಪಟ್ಟು ಹಿಡಿದರೆ, ಆ ರೀತಿ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ