Breaking News

ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್‌ ಆಗ್ರಹ – ಗೂಂದಲದ ಗೂಡಾಯ್ತು ಚುನಾವಣೆ

Spread the love

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಎಲೆಕ್ಟೊರಲ್ ಮತಗಳ ಎಣಿಕೆಯಲ್ಲಿ ಜೋ ಬೈಡನ್ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ಫಿಗರ್ 270ರ ಸನಿಹದಲ್ಲಿದ್ದಾರೆ. ಸದ್ಯ ಜೋ ಬೈಡನ್‍ಗೆ 264 ಮತ ಬಿದ್ದಿದ್ರೆ, ಟ್ರಂಪ್‍ಗೆ 214 ಮತಗಳಷ್ಟೇ ಬಂದಿವೆ.

ಇಲ್ಲಿಯವರೆಗೆ 45 ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಪೆನ್ಸಿಲ್ವೇನಿಯಾ, ಜಾರ್ಜಿಯಾ, ನಾರ್ತ್ ಕರೋಲಿನಾ, ನೆವಾಡ, ಅಲಸ್ಕಾ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಈ ಐದರ ಪೈಕಿ ಮೂರರಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ.

ಮಿಚಿಗನ್, ಜಾರ್ಜಿಯಾ ಮತ್ತು ಪೆನ್ಸಲ್ವೇನಿಯಾ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಟ್ರಂಪ್, ಮತ ಎಣಿಕೆ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತಾ ಆರೋಪಿಸಿ ಅಮೆರಿಕಾದ ಎಲ್ಲೆಡೆ ಟ್ರಂಪ್ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಳ್ತಿದ್ದು, ಮತ ಎಣಿಕಾ ಕೇಂದ್ರಗಳ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ. ಇದೆಲ್ಲವನ್ನು ನೋಡಿದ್ರೆ, ತಕ್ಷಣವೇ ಸಂಪೂರ್ಣ ಫಲಿತಾಂಶ ಪ್ರಕಟವಾಗುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ಯಾಕೆ ಈ ಗೊಂದಲ?
ಅಧ್ಯಕ್ಷೀಯ ಚುನಾವಣೆ ಸಂಬಂಧ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ನಿಯಮಗಳು ಇಲ್ಲ. ವೋಟಿಂಗ್, ಪೋಸ್ಟಲ್ ಬ್ಯಾಲೆಟ್‍ಗಳ ವಿಚಾರದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಯಮವಿದೆ.

ಭಾರತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಇರುತ್ತದೆ. ಆದರೆ ಇಲ್ಲಿ ರಾಜ್ಯ ಚುನಾವಣಾ ಸಂಸ್ಥೆಗಳೇ ಎಲೆಕ್ಷನ್ ನಿರ್ವಹಿಸುತ್ತವೆ. ನಮ್ಮ ದೇಶದಲ್ಲಿ 14 ಗುರುತಿನ ಚೀಟಿ ಪೈಕಿ ಯಾವುದನ್ನು ತೋರಿಸಿದರೂ ವೋಟ್ ಹಾಕಲು ಬಿಡುತ್ತಾರೆ. ಆದ್ರೆ ಅಮೇರಿಕಾದಲ್ಲಿ ಹಾಗಲ್ಲ. ಯಾವುದನ್ನು ಪರಿಗಣಿಸುತ್ತಾರೆ ಯಾವುದನ್ನು ತಿರಸ್ಕರಿಸುತ್ತಾರೆ ಎಂಬುದನ್ನು ಹೇಳುವುದೇ ಕಷ್ಟ. ಒಂದೊಂದು ರಾಜ್ಯದಲ್ಲಿಯೂ ಒಂದೊಂದು ನಿಯಮವಿದೆ.

50 ರಾಜ್ಯಗಳ ಪೈಕಿ 33ರಲ್ಲಿ ರಾಜಕೀಯ ನಾಯಕರನ್ನೇ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತದೆ. ಅವರ ರಾಜಕೀಯ ಹಿನ್ನೆಲೆ, ವ್ಯಕ್ತಿತ್ವದ ಆಧಾರದ ಮೇಲೆ ಚುನಾವಣಾ ಸಂಸ್ಥೆಯ ವ್ಯವಹಾರ ಶೈಲಿ ಇರುತ್ತದೆ. ಒಂದು ಪಕ್ಷದ ಪರವೇ ನಿರ್ಣಯ ಕೈಗೊಳ್ಳುವುದು ಹೆಚ್ಚು. ಇದು ವಿವಾದಕ್ಕೆ ಎಡೆ ಮಾಡುತ್ತಿದೆ


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ