ಗದಗ, (ಅಕ್ಟೋಬರ್ 02): ಮಲಪ್ರಭಾ ನದಿಯಿಂದ ಹೊರಬಂದ ಮೊಸಳೆ(crocodile) ರೈಲಿಗೆ (Train) ಸಿಲುಕಿ ಮೃತಪಟ್ಟಿದೆ. ಗದಗ(Gadag) ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ಹಳಿದಾಟುವ ವೇಳೆ ರೈಲಿಗೆ ಸಿಲುಕಿ 8 ಅಡಿ ಉದ್ದದ ಮೊಸಳೆ ಸಾವನ್ನಪ್ಪಿದೆ. ಮಲಪ್ರಭಾ ನದಿಯಿಂದ ಆಚೆ ಬಂದಿದ್ದ ಮಸೂಳೆ, ಹಳಿದಾಟುವ ವೇಳೆ ಅದೇ ಸಂದರ್ಭದಲ್ಲಿ ಬಂದ ರೈಲು ಮೇಲೆ ಹರಿದಿದೆ. ಪರಿಣಾಮ ಮಸೂಳೆಯ ದೇಹ ಎರಡು ಭಾಗವಾಗಿದೆ. ಇನ್ನು ಸ್ಥಳೀಯರು ನೋಡಿ ಮೃತಪಟ್ಟ ಮಸೂಳೆಯನ್ನು ರೈಲ್ವೇ ಹಳಿಯಿಂದ ಆಚೆ ಹಾಕಿದರು.
Laxmi News 24×7