ಟೆಕ್ ದಿಗ್ಗಜ ‘ಗೂಗಲ್‌’ ಇಂದು ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​​ ಮೂಲಕ ಆಚರಿಸಿಕೊಂಡಿದೆ.

Spread the love

ಟೆಕ್ ದಿಗ್ಗಜ ‘ಗೂಗಲ್‌’ ಇಂದು ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷ ಡೂಡಲ್​​ ಮೂಲಕ ಆಚರಿಸಿಕೊಂಡಿದೆ.

Google 25th Birthday: ಜಾಗತಿಕ ಟೆಕ್​ ದೈತ್ಯ, ಎಲ್ಲರ ನೆಚ್ಚಿನ ಸರ್ಚ್ ಇಂಜಿನ್ ‘ಗೂಗಲ್’​ಗೆ ಇಂದು 25 ವರ್ಷ ತುಂಬಿದ್ದು, ಡೂಡಲ್ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

“ವಾಕ್ ಡೌನ್ ಮೆಮೊರಿ ಲೇನ್” ಮೂಲಕ ಕಂಪನಿಯು ತನ್ನ ಜನ್ಮದಿನದಂದು ವಿಭಿನ್ನ ಡೂಡಲ್‌ಗಳನ್ನು ಪ್ರದರ್ಶಿಸಿತು.

 

 

ಹೊಸ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮಾಡುವ ಮೂಲಕ ವಿಶ್ವದ ಮನೆ ಮಾತಾಗಿರುವ ಗೂಗಲ್‌ನ ಇಂದಿನ ಹೊಸ ಟ್ಯಾಬ್ ತೆರೆದರೆ GIFನೊಂದಿಗೆ ಬರುತ್ತದೆ. ಅದು ‘Google’ ಅನ್ನು ‘G25gle’ ಆಗಿ ಪರಿವರ್ತಿಸುತ್ತದೆ. 25-ಎಂಬುದು ವರ್ಷಗಳನ್ನು ಸೂಚಿಸುತ್ತದೆ. ಒಮ್ಮೆ ನೀವು ಲೋಗೋ ಮೇಲೆ ಕ್ಲಿಕ್ ಮಾಡಿದರೆ, ನೀವು ಪುಟದಲ್ಲಿ ಕಾನ್ಫೆಟ್ಟಿಯನ್ನು ನೋಡಬಹುದು.

“ಇಂದಿನ ಡೂಡಲ್ ಗೂಗಲ್​ನ 25ನೇ ವರ್ಷವನ್ನು ಆಚರಿಸುತ್ತಿದೆ. ಇಲ್ಲಿ (Google) ನಾವು ಭವಿಷ್ಯದ ಕಡೆಗೆ ಗಮನಹರಿಸುತ್ತೇವೆ. ಇದು ಜನ್ಮದಿನವನ್ನು ಪ್ರತಿಬಿಂಬಿಸುವ ಸಮಯವೂ ಹೌದು. ನಾವು 25 ವರ್ಷಗಳ ಹಿಂದೆ ಹೇಗೆ? ಹುಟ್ಟಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ನೆನಪಿನ ಹಾದಿಯಲ್ಲಿ ನಡೆಯೋಣ” ಎಂದು ಕಂಪನಿ ತನ್ನ ಬ್ಲಾಗ್​ನಲ್ಲಿ ಬರೆದಿದೆ.

“ಇಂದಿನ ಡೂಡಲ್‌ನಲ್ಲಿ ಕಂಡುಬರುವಂತೆ ನಮ್ಮ ಲೋಗೋ ಸೇರಿದಂತೆ 1998ರಿಂದ ಬಹಳಷ್ಟು ಬದಲಾಗಿದೆ. ಆದರೆ ಪ್ರಪಂಚದ ಮಾಹಿತಿಯನ್ನು ಸಂಘಟಿಸಲು ಮತ್ತು ಅದನ್ನು ಸಾರ್ವತ್ರಿಕವಾಗಿ ಪ್ರವೇಶಿಸಲು ಮತ್ತು ಉಪಯುಕ್ತವಾಗಿಸಲು ನಮ್ಮ ಗುರಿ ಒಂದೇ ಆಗಿರುತ್ತದೆ. ಕಳೆದ 25 ವರ್ಷಗಳಲ್ಲಿ ನಮ್ಮೊಂದಿಗೆ ವಿಕಸನಗೊಂಡಿದ್ದಕ್ಕಾಗಿ ಧನ್ಯವಾದಗಳು. ಭವಿಷ್ಯವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ” ಎಂದು ಕಂಪನಿ ಹೇಳಿದೆ.

 

 

ಗೂಗಲ್​ನ ಇತಿಹಾಸ: ಜಗತ್ತಿನ ಎಲ್ಲ ಮಾಹಿತಿಯನ್ನು ಸಂಘಟಿತ ರೂಪದಲ್ಲಿ ಎಲ್ಲರಿಗೂ ಸಿಗುವ ಹಾಗೆ ಮಾಡುವ ಪ್ರಮುಖ ಉದ್ದೇಶ ಇಟ್ಟುಕೊಂಡು, ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಕಳೆದ 25 ವರ್ಷಗಳ ಹಿಂದೆ ಹುಟ್ಟು ಹಾಕಿದ ಗೂಗಲ್ ಇಂದು ವಿಶ್ವದ ಟೆಕ್ ದಿಗ್ಗಜನಾಗಿ ಬೆಳೆದು ನಿಂತಿದೆ. 1998ರಲ್ಲಿ ಗೂಗಲ್ ಎಂಬ ಸಣ್ಣ ಸರ್ಚ್ ಇಂಜಿನ್​ ಕಂಪನಿಯನ್ನು ಸ್ಥಾಪಿಸಿದಾಗ ಇದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಅವರು ಊಹಿಸಿರಲಿಲ್ಲ. ಹಾಗಾದರೆ ಗೂಗಲ್ ಎಂಬ ಮಾಯಾ ಪ್ರಪಂಚ ಬೆಳೆದು ಬಂದಿದ್ದು ಹೇಗೆ ಗೊತ್ತೇ?.

‘ಗೂಗಲ್’ ಎಂಬ ಹೆಸರೇ ಅಗಾಧ. ಜಗತ್ತಿನ ಬಹುತೇಕ ಎಲ್ಲಾ ಮಾಹಿತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ ಟೆಕ್ ದಿಗ್ಗಜ ಈಗ ಆಂಡ್ರಾಯ್ಡ್, ಯೂಟ್ಯೂಬ್, ಡ್ರೈವ್, ಜಿ ಮೇಲ್ ಹೀಗೆ ಹಲವು ಸೇವೆಗಳನ್ನು ನೀಡುವ ಒಂದು ಅಸಾಧಾರಣ ಸಂಸ್ಥೆ. ಆಗ ಕೇವಲ 1 ಮಿಲಿಯನ್ ಡಾಲರಿಗೆ ಮಾರಾಟಕ್ಕಿದ್ದ ಗೂಗಲ್ ಇಂದು ಸಾವಿರ ಬಿಲಿಯನ್ ಡಾಲರ್ ಬೆಲೆ ಬಾಳುವ ಕಂಪನಿಯಾಗಿ ರೂಪುಗೊಂಡದ್ದು ಸೋಜಿಗವೇ ಸರಿ.

ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗೆ ಬ್ರಿನ್‌ ಸೆಪ್ಟೆಂಬರ್ 27, 1998 ರಂದು ಗೂಗಲ್​ನ್ನು ಹುಟ್ಟು ಹಾಕಿದರು. ಇಂಟರ್ನೆಟ್ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳುವ ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಜನ್ಮ ತಾಳಿತು. ಇದಕ್ಕೆ ಗೂಗಲ್ ಎಂದು ಹೆಸರು ಬರಲು ಒಂದು ವಿಶೇಷ ಕಾರಣವಿತ್ತು. ಗೂಗಲ್​ನ್ನು ಈ ಮೊದಲು ಅಪರಿಮಿತ ಎಂಬುದ ಪದಕ್ಕೆ ಅರ್ಥವಾಗಿ ಬಳಸುತ್ತಿದ್ದರು.

ಇದಕ್ಕೆ ಉದಾಹರಣೆಯನ್ನು ಹೀಗೆ ನೀಡಲಾಗಿದೆ. ‘ನಿಮಗೆ ಎಂದಿಗೂ ಮುಗಿಯದೇ ಇರುವ ಇಂಕ್​ನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲ ವರವಾಗಿ ನೀಡಿದ ನಂತರ ಕೇವಲ 1ರ ಸಂಖ್ಯೆಯ ಮುಂದೆ ಎಷ್ಟು ಸೊನ್ನೆಗಳನ್ನು ಬರೆಯುತ್ತೀರಾ?. ಅಂದರೆ ಈ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ‘ಗೂಗಲ್’ ಎಂದು ಕರೆಯುತ್ತಾರೆ. ಸರಳಬಾಗಿ 1ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಅದೇ ಈ ಗೂಗಲ್’


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ