ಚಿಕ್ಕೋಡಿ(ಬೆಳಗಾವಿ): ಗುಡ್ಕಾ ತಿಂದು ರಸ್ತೆಗೆ ಉಗುಳಿದ ವ್ಯಕ್ತಿಗೆ ಕೊರೊನಾ ವಾರಿಯರ್ ಶಿಕ್ಷೆ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.
ಕೊರೊನಾ ಮಹಾಮಾರಿ ಹರಡುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಗುಟ್ಕಾ ತಿಂದು ನಿಪ್ಪಾಣಿ ನಗರಸಭೆ ಎದುರು ರಸ್ತೆಗೆ ಉಗುಳಿದ್ದಾನೆ. ಇದನ್ನು ಕೊರೊನಾ ವಾರಿಯರ್ ಒಬ್ಬರು ಗಮನಿಸಿದ್ದಾರೆ. ಅಲ್ಲದೆ ಕೂಡಲೇ ಆತನಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಿದ್ದಾರೆ.

ವ್ಯಕ್ತಿ ಉಗಿದ ಕೂಡಲೇ ಸ್ಥಳಕ್ಕೆ ಬಂದ ಪೌರಾಯುಕ್ತ ಮಹಾವೀರ ಬೋರನ್ನವರ , ಆತನ ಅಂಗಿ ಬಿಚ್ಚಿಸಿ ಅದರಿಂದಲೇ ಉಗಿದ ಜಾಗ ಕ್ಲೀನ್ ಮಾಡಿಸಿದ್ದಾರೆ. ಈ ಮೂಲಕ ಕೊರೊನಾ ಆತಂಕದ ನಡುವೆ ಗುಟ್ಕಾ ತಿಂದು ಉಗುಳುವವರಿಗೆ ಪೌರಾಯುಕ್ತರು ಪಾಠ ಕಲಿಸಿದ್ದಾರೆ.

Laxmi News 24×7