Breaking News

ಜೋಕುಮಾರಸ್ವಾಮಿ ಮಳೆ ತರುವ ಸ್ವಾಮಿ

Spread the love

ವಿಜಯಪುರ…ಉತ್ತರ ಕರ್ನಾಟಕದಲ್ಲಿ ಗಣೇಶ ಚತುರ್ಥಿಯೊಂದಿಗೆ ಹಲವು ಆಚರಣೆಗಳು ಗರಿಗೆದರುತ್ತವೆ. ಅಂತಹ ಆಚರಣೆಗಳಲ್ಲಿ ಒಂದು ಜೋಕುಮಾರಸ್ವಾಮಿಯ ಪೂಜೆ. ಗಣೇಶ ಹೋದ ನಂತರ ಹುಟ್ಟುವ ಜೋಕುಮಾರ ಸ್ವಾಮಿ ಮಳೆ ಬೆಳೆ ತರುವುದರ ಜೊತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಸಮೃದ್ಧಿಯನ್ನು ನೀಡುತ್ತಾನೆ ಎಂದೇ ಜನಪದರ ನಂಬಿಕೆ.

ಹುಟ್ಟಿದ ಏಳು ದಿನಕ್ಕೆ ಪಟ್ಟಣವ ತಿರುಗ್ಯಾನೆ ದಿಟ ಕಾಣೆ ದೇವಿ ನಿನ್ನಮಾಗ ಒಕ್ಕಲಾರ ಕೇರಿಗೆ ಹೋಗುತ್ತಾನೆ, ನಮ್ಮ ಕುವರ ಒಕ್ಕುಲಾರ ಹೂವ ಮುಡಿದಾನೆ ಒಕ್ಕುಲಾರ ಹುಡುಗಿ ನನಗಿಷ್ಟ ಅಂದಾರೆ, ಅನಲಿಲ್ಲ ಮನೆಗೇಕೆ ಬರಲಿಲ್ಲ, ಇವಗಾಕಿದ ಮಂಚ ಕಿಲಿಕಿಲಿ ಮಾತಾಡುತ್ತಾವೆ, ಕೈಬೀಸಿ ಮಳೆಯ ಕರೆದ್ಯೆನೆ’ -ಎಂದು ಹಾಡುತ್ತಾ ಬುಟ್ಟಿಯೊಂದರಲ್ಲಿ ಜೋಕುಮಾರನನ್ನು ಮನೆ ಮನೆಗೆ ಕೊಂಡೊಯ್ಯುವ ಆಚರಣೆ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಆರಂಭಗೊಂಡಿದ್ದು, ಬಂಡೆ ಕುಟುಂಬದ ಸುರೇಖಾ ಜೋಕುಮಾರನಿಗೆ ಪೂಜೆ ಸಲ್ಲಿಸುತ್ತಿರುವುದು. ಗಣೇಶ ಸವಿಸವಿಯಾದ ಭೋಜನ ಸವಿದು ಹೋದರೆ, ಜೋಕಮಾರಸ್ವಾಮಿ ಮನೆ ಮನೆಗೆ ಸುತ್ತಿ ಜನರು ಪಡುವ ಕಷ್ಟಗಳನ್ನು ನೋಡಿ ಅವುಗಳನ್ನು ಶಿವನಿಗೆ ತಿಳಿಸುತ್ತಾನೆ. ಜೋಕುಮಾರ ಸ್ವಾಮಿ ಹೋದ ನಂತರ

ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ. ಜೋಕುಮಾರಸ್ವಾಮಿಗೆ ನುಚ್ಚು ಪುಂಡಿಪಲ್ಯ ಕಟಕು ರೊಟ್ಡಿ. ಮೆಣಸಿನಕಾಯಿ ಉಪ್ಪು ಇವೇ ನೈವೇದ್ಯವಾಗಿದೆ. ಜೋಕುಮಾರನು ಮಣ್ಣಿನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿಯಾಗಿದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ ಎಲೆ. ಅಡಿಕೆ, ಉಲುಪಿ (ಹಿಟ್ಟು, ಬೇಳೆ, ಬೆಲ್ಲ, ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟು ಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ. ಜೋಕುಮಾರನನ್ನು ಬೇವಿನತಪ್ಪಲ ತುಂಬಿದ ಬುಟ್ಟಿಯಲ್ಲಿಟ್ಡುಕೊಂಡು ಮನೆ ಮನೆಗೆ ಹೋಗುವ ಮಹಿಳೆಯರು ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ  ಹೈನಾಗಿ” ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು, ಬೇವಿನ ಎಲೆಯಲ್ಲಿ ಕಾಡಿಗೆ (ಕಪ್ಪು) ನೀಡುತ್ತಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ