Breaking News

ಕಾಂತಾರ 2′ ಚಿತ್ರಕ್ಕಾಗಿ 11 ಕೆ.ಜಿ ತೂಕ ಇಳಿಸಿಕೊಂಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

Spread the love

ಬಹುನಿರೀಕ್ಷೆಯ ಕಾಂತಾರ 2 ಸಿನಿಮಾಗಾಗಿ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್​ ಶೆಟ್ಟಿ ಸುಮಾರು 11 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕಾಂತಾರ’.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಕಳೆದ ವರ್ಷ ತೆರೆಕಂಡು ಬ್ಲಾಕ್‌ ಬಸ್ಟರ್ ಹಿಟ್ ಆಗಿ, ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಕರಾವಳಿ ಭಾಗದ ದೈವಾರಾಧನೆ ಕಥೆ ಹೊಂದಿರುವ ಕಾಂತಾರ ಅಪಾರ ಸಂಖ್ಯೆಯ ಅಭಿಮಾನಿಗಳು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ದಿಗ್ಗಜರಿಂದ ಅಪಾರ ಮೆಚ್ಚುಗೆ ಗಳಿಸಿತ್ತು.

ಕಾಂತಾರ 2 ಚಿತ್ರಕ್ಕೆ ಸಿದ್ಧತೆ: ಸೂಪರ್​ ಹಿಟ್​ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಎಂದು ಜನಪ್ರಿಯರಾದರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಹೊರಹೊಮ್ಮಿದ್ದಾರೆ. ಈ ಸಕ್ಸಸ್ ಶೆಟ್ಟಿ ಅವರಿಗೆ ಕಾಂತಾರ 2 ನಿರ್ಮಿಸಲು ಸ್ಫೂರ್ತಿ ನೀಡಿದೆ. ಕಾಂತಾರ 2ಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳು ಈಗ ನಡೆಯುತ್ತಿವೆ.

ತೂಕ ಇಳಿಸಿಕೊಂಡ ನಟ: ರಿಷಬ್ ಶೆಟ್ಟಿ ಆಪ್ತರು ಹೇಳುವಂತೆ, ಕಾಂತಾರ 2 ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಕಥೆ ಮಾಡುವುದರ ಜೊತೆಜೊತೆಗೆ ಪಾತ್ರಕ್ಕೆ ಬೇಕಾದ ಒಂದಿಷ್ಟು ದೈಹಿಕ ಕಸರತ್ತುಗಳನ್ನೂ ಮಾಡುತ್ತಿದ್ದಾರೆ. ಚಿತ್ರಕ್ಕಾಗಿ ಶೆಟ್ಟಿ 11 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

 

 

 

ಹೌದು, ಕಾಂತಾರ 2 ಚಿತ್ರದಲ್ಲಿನ ಅವರ ಪಾತ್ರಕ್ಕೆ ತೂಕ ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆಯಂತೆ. ಹೀಗಾಗಿ, ರಿಷಬ್ ಕಳೆದ ಕೆಲ ತಿಂಗಳುಗಳಿಂದ ಡಯಟ್ ಹಾಗೂ ವರ್ಕೌಟ್ ಅಂತಾ ಫಿಟ್ನೆಸ್‌ಗೆ ವಿಶೇಷ ಒತ್ತು ಕೊಡುತ್ತಿದ್ದಾರೆ. ಸುಮಾರು 11 ಕೆ.ಜಿಯಷ್ಟು ತೂಕ ಕಡಿಮೆ ಮಾಡಿಕೊಳ್ಳುವುದರೊಂದಿಗೆ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸಿದ್ದಾರೆ ಎಂಬ ಮಾಹಿತಿ ನಟನ ಆಪ್ತ ವಲಯದಿಂದ ಕೇಳಿ ಬಂದಿದೆ.

ಬಿಗ್​ ಬಜೆಟ್​ನಲ್ಲಿ ಕಾಂತಾರ 2: ‘ಕಾಂತಾರ’ ಮೊದಲ ಭಾಗ 16 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣವಾಗಿದೆ. ಆದರೆ, ಬಾಕ್ಸ್ ಆಫೀಸ್‍ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದವರ ಹುಬ್ಬೇರಿಸಿತ್ತು. ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಕಾಂತಾರ 2 ಸಿನಿಮಾವನ್ನು ಹೊಂಬಾಳೆ ಫಿಲಂಸ್‍ ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಮುಂದಾಗಿದೆ. ಇದರ ಬಜೆಟ್‍ ಮೊದಲ ಚಿತ್ರಕ್ಕಿಂತಲೂ ನಾಲ್ಕೈದು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ