Breaking News

ಮಹಾರಾಷ್ಟ್ರದ ಪುಣೆ – ಬೆಂಗಳೂರು ಹೆದ್ದಾರಿಯಲ್ಲಿ ಐಸರ್​​​ ಟೆಂಪೋ ಲಾರಿ ಅಪಘಾತ ,ಕರ್ನಾಟಕದ ಮೂವರು ಸ್ಥಳದಲ್ಲೇ ಸಾವು

Spread the love

ಪುಣೆ( ಮಹಾರಾಷ್ಟ್ರ): ಇಲ್ಲಿನ ಪುಣೆ – ಬೆಂಗಳೂರು ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಐಸರ್​ ಟೆಂಪೋ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ಅಪಘಾತದಲ್ಲಿ ಟೆಂಪೋ ಮಾಲೀಕ, ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮೂವರೂ ಬೆಳಗಾವಿ ಜಿಲ್ಲೆಯವರು. ಬುಧವಾರ ರಾತ್ರಿ ಸತಾರಾ – ಖಂಡಾಲಾ ತಾಲೂಕಿನ ಧನಗರವಾಡಿ (ಈಗ ಖಂಡಾಲಾ) ಗ್ರಾಮದ ವ್ಯಾಪ್ತಿಯ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಐಸರ್​ ಟೆಂಪೋ ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಮೃತರ ಹೆಸರು ಮಂಜುನಾಥ ಯಲ್ಲಪ್ಪ ಕವಲಿ, ಆನಂದ ಗುರುಸಿದ್ಧ ಗಂಗೈ ( ಇಬ್ಬರೂ ಬೆಳಗಾವಿ ಜಿಲ್ಲೆ ಗೋಕಾಕ್​​ ತಾಲೂಕಿನ ಪಾಮಲ್​ ದಿನಿಯ ನಿವಾಸಿಗಳು ) ನಾಯಿಕಪ್ಪ ಸತ್ಯಪ್ಪ ನಾಯ್ಕರ್ ( ರಾಮದುರ್ಗದ ಉಜ್ಜನಕೋಪ್ಪ ನಿವಾಸಿ) ಎಂಬುದು ತಿಳಿದು ಬಂದಿದೆ.

ನುಜ್ಜುಗುಜ್ಜಾಗಿರುವ ಐಸರ್​ ಟೆಂಪೋ : ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್‌ ಒಡೆದ ಪರಿಣಾಮ ಟ್ರಕ್‌ ಕೊಳೆಗೇರಿಯ ಮುಂಭಾಗದ ಹೆದ್ದಾರಿಯ ಬದಿ ನಿಂತಿತ್ತು. ಟಯರ್ ಬದಲಾಯಿಸಿದ ಬಳಿಕ ಚಾಲಕ ಲಾರಿ ಸ್ಟಾರ್ಟ್ ಮಾಡಿಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಐಸರ್​ ಟೆಂಪೋ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟೆಂಪೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವು ಎಷ್ಟು ತೀವ್ರವಾಗಿತ್ತು ಎಂದರೆ ಸರಕು ಸಾಗಣೆ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಐಸರ್​ ಟೆಂಪೋ ನಜ್ಜುಗುಜ್ಜಾಗಿದೆ. ಪೊಲೀಸರು ಮತ್ತು ಶಿರವಾಳ ರಕ್ಷಣಾ ತಂಡ ಕ್ರೇನ್ ಮತ್ತು ಜೆಸಿಬಿ ಸಹಾಯದಿಂದ ಟೆಂಪೋವನ್ನು ಹೊರತೆಗೆದಿದ್ದಾರೆ.

ಅಪಘಾತದ ನಂತರ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ: ಟೆಂಪೋ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಿಂದ ಪುಣೆ – ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಅವರು ಸಹಾಯಕ್ಕಾಗಿ ಶಿರ್ವಾಲ್ ರಕ್ಷಣಾ ತಂಡವನ್ನು ಕರೆದರು. ಬಳಿಕ ಲಾರಿಗೆ ಡಿಕ್ಕಿ ಹೊಡೆದ ಟೆಂಪೋವನ್ನು ಕ್ರೇನ್ ಮತ್ತು ಜೆಸಿಬಿ ತಂದು ಪಕ್ಕಕ್ಕೆ ಎಳೆದಿದ್ದಾರೆ.


Spread the love

About Laxminews 24x7

Check Also

ಯತ್ನಾಳ್ ಕಾಟವನ್ನೇ ಸಹಿಸಿಕೊಳ್ಳಲು ಬಿಜೆಪಿಯವರಿಗೆ ಆಗ್ತಾ ಇಲ್ಲ:ಜಮೀರ್ ಅಹ್ಮದ್

Spread the loveದಾವಣಗೆರೆ: ಬಿಜೆಪಿಯವರಿಗೆ ಯತ್ನಾಳ್ ಕಾಟವನ್ನೇ ಸಹಿಸಿಕೊಳ್ಳಲು ಆಗ್ತಾ ಇಲ್ಲ, ನಮ್ಮ ಪಕ್ಷದ ವಿಚಾರ ಏನಕ್ಕೆ ಬೇಕು? ಮೊದಲು ಯತ್ನಾಳ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ