ಬೆಳಗಾವಿ: ನೆರೆಯ ರಾಜ್ಯ ಪುಣೆ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಮೂರು ದಿನಗಳವರೆಗೆ ನಡೆದ 5 ನೇ ರಾಷ್ಟ್ರೀಯ ವಿಲಚೆರ್ ರಜ್ವಿ ಚಾಂಪಿಯನಶಿಪ್ ನಲ್ಲಿ ಕರ್ನಾಟಕ ತಂಡವು ದ್ವೀತಿಯ ಸ್ಥಾನ ಪಡೆದು, ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದೆ.
ಸೆ. 9 ರಿಂದ 11 ವರೆಗೆ ಮೂರು ದಿನಗಳ ಕಾಲ ಪುಣೆನ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ 5 ನೇ ರಾಷ್ಟ್ರೀಯ ವಿಲಚೆರ್ ರಜ್ವಿ ಚಾಂಪಿಯನಶಿಪ್ ನಲ್ಲಿ ಕರ್ನಾಟಕ ತಂಡದಿಂದ ಪ್ರತಿನಿಧಿಸಿದ ಬೆಳಗಾವಿಯ ಮಹಾಂತೇಶ್ ಹೊಂಗಲ, ದಿನೇಶ ಸಿದ್ರಾಗವಳಿ , ಶ್ರೀಕಾಂತ ದೇಸಾಯಿ ಮೂವರು ಕ್ರೀಡಾಪಟುಗಳು ವಿಜೇತರಾಗಿದ್ದಾರೆ.
ಈ ಕ್ರೀಡಾಕೂಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದವು, ಈ ಪೈಕಿ ಮಹಾರಾಷ್ಟ್ರ ಪ್ರಥಮ ಸ್ಥಾನ, ಕರ್ನಾಟಕ ತಂಡವು ದ್ವಿತೀಯ ಸ್ಥಾನ ಹಾಗೂ ಬಿಹಾರ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ತರಬೇತಿ ಶಿಕ್ಷಕ ಬಸಪ್ಪ ಸುನ್ನದೊಳಿ ಹಾಗೂ ಬೆಳಗಾವಿಯ ಕ್ರೀಡಾಪಟುಗಳಿಗೆ ಬೆಳಗಾವಿಯ ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷರಾದ ಸುರೇಶ ಯಾದವ ಹಾಗೂ ನಿವೃತ್ತ ಪ್ರಾದೇಶಿಕ ಆಯುಕ್ತರಾದ ಎಮ್. ಜಿ. ಹಿರೇಮಠ ಮತ್ತು ವಿ. ಎಸ್. ಪಾಟೀಲ ಅವರು ಸತ್ಕರಿಸಿ, ಶುಭ ಹಾರೈಸಿದ್ದಾರೆ.
ಬಳಿಕ ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷರಾದ ಸುರೇಶ ಯಾದವ ಮಾತನಾಡಿ, ಬೆಳಗಾವಿ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮಕ್ಕಳು ಬೆಳಗಾವಿ ಕೀರ್ತಿ ಹೆಚ್ಚಿದ್ದಾರೆ. ಇನ್ನೂ ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಈ ಕ್ರೀಡಾಪಟುಗಳ ಸಾಧನೆ ಇಂದಿನ ಯುವಕರಿಗೆ ಸ್ಪೂರ್ತಿ ಎಂದು ಶುಭ ಹಾರೈಸಿದ್ದಾರೆ.