Breaking News

ಮಲೆನಾಡು ಭಾಗದಲ್ಲಿ ಹಬ್ಬ ಹರಿದಿನಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿವೆ.

Spread the love

ಶಿರಸಿ: ಮಲೆನಾಡು ಭಾಗದಲ್ಲಿ ಹಬ್ಬ ಹರಿದಿನಗಳು ತನ್ನದೇ ಆದ ವೈಶಿಷ್ಟ್ಯತೆ ಉಳಿಸಿಕೊಂಡಿವೆ.

ಅದರಲ್ಲೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆಯುವ ಚಕ್ಲಿ ಕಂಬಳಕ್ಕೆ ಹಲವು ವಿಶೇಷತೆಗಳಿವೆ. ಈಗ ಚೌತಿಗೆ ಕೆಲವೇ ದಿನ ಉಳಿದಿರುವಾಗ ಮಲೆನಾಡಿನ ಶಿರಸಿಯ ಗ್ರಾಮೀಣ ಭಾಗದಲ್ಲಿ ಜೋರಾಗಿ ಚಕ್ಲಿ ಕಂಬಳ ನಡೆಯುತ್ತಿದೆ.

ಗ್ರಾಮೀಣ ಸೊಗಡಿನ ವೈಶಿಷ್ಟ್ಯತೆ ಸಾರುವ ಶಿರಸಿಯ ಚಕ್ಲಿ ಕಂಬಳ

ಮಲೆನಾಡಿನ ಭಾಗದಲ್ಲಿ ಹಬ್ಬ ಹರಿದಿನಗಳು ವಿಭಿನ್ನ, ವೈವಿಧ್ಯ, ಅದೇ ಇಲ್ಲಿನವರ ವಿಶೇಷತೆ. ಹಬ್ಬ ಹರಿದಿನವಿರಬಹುದು, ಪೂಜೆ ಪುನಸ್ಕಾರಗಳಿರಬಹುದು, ಎಲ್ಲದರಲ್ಲಿಯೂ ಇತರರಿಗಿಂತ ಸ್ವಲ್ಪ ವಿಭಿನ್ನ.

 

ಈಗ ಗೌರಿ ಗಣೇಶ ಹಬ್ಬದ ಸಂಭ್ರಮ. ಮಲೆನಾಡಿಗರಲ್ಲಿ ಅದರಲ್ಲೂ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದವರಿಗೆ ಈ ಹಬ್ಬದ ಸಡಗರ ಸ್ವಲ್ಪ ಜಾಸ್ತಿಯೇ. ಗಣೇಶ ಚತುರ್ಥಿ ಆಗಮಿಸುತ್ತಿದ್ದಂತೆ ಎಲ್ಲರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಒಂದಲ್ಲಾ ಒಂದು ವಿಶೇಷತೆಯಿಂದ ಹಬ್ಬವನ್ನ ಆಚರಿಸೋ ಮಲೆನಾಡಿಗರು ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸ್ತಾರೆ. ಇದೀಗ ಗಣೇಶ ಚೌತಿಗೆ ಮಾಡುವ ಗಣೇಶನಿಗೆ ಪ್ರಿಯವಾದ ಈ ಚಕ್ಕುಲಿ ಕಂಬಳ ಕೆಲಸ ಎಲ್ಲೆಡೆ ಸಂಭ್ರಮದಿಂದ ಸಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ