Breaking News

ಮಳೆ ನಮ್ಮನ್ನು ಉಳಿಸಿದೆ’: ಭಾರತ – ಪಾಕ್ ಹಣಾಹಣಿ ಬಗ್ಗೆ ಶೋಯೆಬ್ ಅಖ್ತರ್ ಹೇಳಿಕೆ

Spread the love

ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್​​​ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಳೆ ಎರಡನೇ ಬಾರಿಗೆ ಅಡ್ಡಿ ಮಾಡಿದೆ. ಲೀಗ್​ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್​ ಮಾತ್ರ ಆಡಲು ಸಾಧ್ಯವಾಯಿತು.

ಸೂಪರ್​ ಫೋರ್​ ಹಂತದ ಪಂದ್ಯ ನಿನ್ನೆ (ಭಾನುವಾರ) ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ 24.1 ಓವರ್​ ವರೆಗೆ ಸುಸೂತ್ರವಾಗಿ ನಡೆದಿತ್ತು. ಆದರೆ ಈ ವೇಳೆ ಬಂದ ಮಳೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಎಡೆಬಿಡದೇ ಸುರಿದ ಪರಿಣಾಮ ಮೈದಾನ ತೇವವಾಗಿದೆ ಎಂದು ಮೀಸಲು ದಿನವಾದ ಸೋಮವಾರಕ್ಕೆ ಪಂದ್ಯವನ್ನು ಮುಂದೂಡಲಾಗಿದೆ.

 

 

ನಿನ್ನೆ ಮಳೆ ಬಂದು ಪಂದ್ಯವನ್ನು ಮುಂದೂಡಿದ ನಂತರ ಶೋಯೆಬ್ ಅಖ್ತರ್ ಎಕ್ಸ್ ಆಯಪ್​ನಲ್ಲಿ ವಿಡಿಯೋ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ “ಮಳೆ ನಮ್ಮನ್ನು ಅಂತಿಮವಾಗಿ ಉಳಿಸಿದೆ, ಕಳೆದ ಬಾರಿ ಭಾರತವನ್ನು ಉಳಿಸಲು ಮಳೆ ಬಂದಿತು; ಇಂದು ನಾವು ಅಪಾಯದಲ್ಲಿದ್ದೆವು ಮತ್ತು ಮಳೆ ನಮ್ಮನ್ನು ರಕ್ಷಿಸಲು ಬಂದಿತು” ಎಂದು ಹೇಳಿದ್ದಾರೆ.

ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ 48 ವರ್ಷದ ಶೋಯೆಬ್ ಅಖ್ತರ್ ಹೀಗೆ ಹೇಳಲು ಪ್ರಮುಖ ಕಾರಣ ನಿನ್ನೆ ಭಾರತ ತಂಡ ಪಾಕಿಸ್ತಾನಿ ಬೌಲರ್​ಗಳನ್ನು ಉತ್ತಮವಾಗಿ ಎದುರಿಸಿದ ರೀತಿ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದು ಆರಂಭಿಕರು ಜೀವದಾನಗಳನ್ನು ಪಡೆದರೂ, ಪಾಕ್​ನ ಬೌಲರ್​ಗಳನ್ನು ಅಂಜದೇ ಎದುರಿಸಿದರು. ಶುಭಮನ್​ ಗಿಲ್​ ಪಾಕಿಸ್ತಾನದ ಸ್ಟಾರ್​ ವೇಗಿ ಶಾಹೀನ್​ ಶಾ ಅಫ್ರಿದಿ ಬೌಂಲಿಂಗ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಬೌಂಡರಿ ಬಾರಿಸಿ ಗಮನ ಸೆಳೆದಿದ್ದರು. ಇನ್ನು ಅಫ್ರಿದಿ 5 ಓವರ್​ಗೆ 37 ರನ್​ ಬಿಟ್ಟುಕೊಟ್ಟಿದ್ದರು.

ರೋಹಿತ್​​ ಶರ್ಮಾ ಅವರನ್ನು ಪಾಕ್​ನ ಯುವ ಬೌಲರ್​ ನಸೀಮ್​ ಕಾಡಿದರು. ಆದರೆ ರೋಹಿತ್​ ಪವರ್​ ಪ್ಲೇ ನಂತರ ಸ್ಪಿನ್ನರ್​ಗಳಿಗೆ ಕ್ಲಾಸ್​ ತೆಗೆದುಕೊಂಡರು. ಶಾಬಾದ್​ ಖಾನ್​ ಅವರು 13ನೇ ಓವರ್​ ಮಾಡಲು ಬಂದಾಗ ಎರಡು ಸಿಕ್ಸ್​ ಮತ್ತು 1 ಬೌಂಡರಿಯಿಂದ ಒಂದೇ 19 ರನ್​ ಕಲೆ ಹಾಕಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ