Breaking News

 G20 ಶೃಂಗಸಭೆ ಶೇ 100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ.

Spread the love

ನವದೆಹಲಿ: G20 ಶೃಂಗಸಭೆ ಶೇ 100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ.

ಹಿಂದೆಂದೂ ಕಾಣದಷ್ಟು ಘೋಷಣೆಗಳಿಗೆ ಸಭೆಯ ಎಲ್ಲ ಸದಸ್ಯರಿಂದ ಅನುಮೋದನೆ ಪಡೆಯಲಾಗಿದೆ. ರಷ್ಯಾ- ಉಕ್ರೇನ್​​​ ವಿಚಾರದ ಬಗ್ಗೆ ಅತ್ಯಂತ ಸಮಚಿತ್ತದ ನಿರ್ಣಯ ಕೈಗೊಳ್ಳುವಲ್ಲಿ ಜಿ-20 ಅಧ್ಯಕ್ಷತೆ ವಹಿಸಿದ್ದ ಭಾರತ ಯಶಸ್ವಿಯಾಗಿದೆ. ಒಟ್ಟಾರೆ ಶೃಂಗದ ಯಶಸ್ವಿಯಾದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತವನ್ನು ಹೊಗಳಿವೆ. ಜಾಗತಿಕ ದಕ್ಷಿಣದ ಧ್ವನಿ(ಗ್ಲೋಬಲ್​ ಸೌತ್​)ನ ಗುಣಗಾನ ನಡೆದಿದೆ.

ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಕಾಳಜಿ ವಹಿಸುವಲ್ಲಿ ಭಾರತದ ಅಧ್ಯಕ್ಷತೆ ಜಿ-20 ಶೃಂಗಸಭೆ ಯಶಸ್ವಿಯಾಗಿದೆ. ಎಲ್ಲ ಅಭಿವೃದ್ಧಿ ಮತ್ತು ಭೌಗೋಳಿಕ ಹಾಗೂ ರಾಜಕೀಯ ವಿಷಯಗಳ ಬಗ್ಗೆ 100 ಪ್ರತಿಶತದಷ್ಟ ಒಮ್ಮತ ಪಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಲ ಆಗಿರುವ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಶ್ಲಾಘಿಸಿದೆ. ಭಾರತವು G20 ಶೃಂಗಸಭೆಯಲ್ಲಿ ವಿಭಜಿತ ವಿಶ್ವ ಶಕ್ತಿಗಳ ನಡುವೆ ರಾಜಿ ಮಾಡುವಲ್ಲಿ ಮೋದಿ ಅವರ ರಾಜತಾಂತ್ರಿಕತೆ ಗೆಲುವು ಕಂಡಿದೆ ಎಂದು ಬರೆದುಕೊಂಡಿದೆ. ಇದೇ ವಿಷಯವನ್ನು ಅದು ಟೈಟಲ್​ ಆಗಿ ಕೊಟ್ಟಿದೆ.

18 ನೇ ಜಿ 20 ಶೃಂಗಸಭೆಯು ಜಗತ್ತನ್ನು ಹೇಗೆ ಸಾಮರಸ್ಯ ಮತ್ತು ವೈವಿಧ್ಯತೆಯನ್ನು ರೂಪಿಸಿತು ಮತ್ತು “18 ನೇ ಜಿ 20 ಶೃಂಗಸಭೆ: ವೈವಿಧ್ಯತೆ ಮತ್ತು ಸಾಮರಸ್ಯದ ಜಗತ್ತು” ಎಂಬ ಶೀರ್ಷಿಕೆಯೊಂದಿಗೆ ಗಲ್ಫ್ ನ್ಯೂಸ್ ಮುಖಪುಟದಲ್ಲಿ ವರದಿ ಬಿತ್ತರಿಸಿದೆ. ಆಸ್ಟ್ರೇಲಿಯನ್ ಸುದ್ದಿವಾಹಿನಿ ABC ನ್ಯೂಸ್, ದೆಹಲಿ ಘೋಷಣೆಯು ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ತನ್ನದೇ ಭಾಷೆಯಲ್ಲಿ ಖಂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಣ್ಣಿಸಿದೆ.

ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ G20 ಶೃಂಗಸಭೆ ಯಶಸ್ವಿಯಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್ ಹೇಳಿದ್ದಾರೆ. ನವದೆಹಲಿ ಶೃಂಗಸಭೆಯ ನಂತರ ಉಭಯ ನಾಯಕರ ನಡುವೆ ಉತ್ತಮ ದ್ವಿಪಕ್ಷೀಯ ಚರ್ಚೆ ನಡೆಯಿತು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಇನ್ನು ಬ್ರಿಟಿಷ್ ದೈನಿಕ ದಿ ಟೆಲಿಗ್ರಾಫ್ ಹೊಸ ವಿಶ್ವ ವ್ಯವಸ್ಥೆ. ಭಾರತ ಏಕೆ ಹೊಸ ವಿಶ್ವವ್ಯವಸ್ಥೆಯ ಸೆಂಟರ್​ ಆಫ್​​​ ಅಟ್ರ್ಯಾಕ್ಷನ್​ ಎಂಬ ಶಿರ್ಷಿಕೆಯೊಂದಿಗೆ ವರದಿಯೊಂದನ್ನು ಮಾಡಿದೆ.

G20 ಶೃಂಗಸಭೆಯಲ್ಲಿ, ಜಾಗತಿಕ ಹವಾಮಾನ ವೈಪರೀತ್ಯ, ಸಾಮಾನ್ಯ ಸವಾಲುಗಳು ಹಾಗೂ ಪರಿಹಾರ. ಜಾಗತಿಕ ಸಾಮರಸ್ಯ ಮತ್ತು ವಿಶ್ವ ಆರ್ಥಿಕ ಚೇತರಿಕೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೇಗೆ ಮಧ್ಯಸ್ಥಿಕೆ ವಹಿಸುವುದು ಎಂಬ ಬಗ್ಗೆ ಶೃಂಗವು ಯಶಸ್ವಿಯಾಗಿ ಸಮಾಲೋಚಿಸಿ, ಚರ್ಚಿಸಿ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಬಣ್ಣಿಸಲಾಗಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ