Breaking News

ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ರೌಡಿ ವಿಶಾಲ್ ಸಿಂಗ್ ಎಂಬಾತನನ್ನು ಬೆಳಗಾವಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Spread the love

ಬೆಳಗಾವಿ : ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಕುಖ್ಯಾತ ರೌಡಿ ವಿಶಾಲ್ ಸಿಂಗ್ ಎಂಬಾತನನ್ನು ಬೆಳಗಾವಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

 

ಕಳೆದ ಸಪ್ಟೆಂಬರ್ 1 ರಂದು ಪ್ಲ್ಯಾಟ್ ತೋರಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಉದ್ಯಮಿ ಒಬ್ಬರನ್ನು ಆತನ ಕಾರಿನಲ್ಲಿ ಅಪಹರಿಸಿದ್ದಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿ ಮೂಲದ ಕುಖ್ಯಾತ ರೌಡಿ ವಿಶಾಲಸಿಂಗ್ ಚೌಹಾನ್ ( 25 ) ಬಂಧಿಸಲಾಗಿದೆ,

 

ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ತನಿಖೆ ಕೈಗೊಂಡಿದ್ದ ಬೆಳಗಾವಿ ನಗರ ಪೊಲೀಸರು ಸಿಸಿಬಿ ಪಿಐ ನಂದೀಶ್ವರ ಕುಂಬಾರ ಹಾಗೂ ಕ್ಯಾಂಪ್ ಠಾಣೆ ಪಿಎಸ್ಐ ಆಲ್ತಾಫ್ ಮುಲ್ಲಾ ನೇತೃತ್ವದಲ್ಲಿ ಪ್ರಕರಣ ವಿರುದ್ಧ ತನಿಖೆ ಕೈಗೊಂಡಿದ್ದರು.

 

ಆರೋಪಿಯನ್ನು ವಶಕ್ಕೆ ಪಡೆಯಲು ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಿದ ಆಯುಧ ಸೇರಿದಂತೆ ಇತನು ಗೋವಾ ರಾಜ್ಯದ ಮಾಪಸಾ, ಬಿಚೋಲಿ, ಸಾಕಳಿ ಮತ್ತು ಅಂಜುನಾ ಸ್ಥಳಗಳಲ್ಲಿ ಸರಗಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ. ಈಗಾಗಲೇ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.


Spread the love

About Laxminews 24x7

Check Also

ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!!

Spread the love ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!! ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ