Breaking News

ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆ .. ಟಾಸ್​ ಗೆದ್ದ ಪಾಕ್ ಬೌಲಿಂಗ್​ ಆಯ್ಕೆ​

Spread the love

ಕೊಲಂಬೊ (ಶ್ರೀಲಂಕಾ): ಕಳೆದ ವಾರ ಮಳೆಯಿಂದ ಭಾರತ – ಪಾಕಿಸ್ತಾನ ಪಂದ್ಯ ರದ್ದಾಗಿತ್ತು. ಈಗ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದಲ್ಲಿ ಎರಡು ತಂಡಗಳು ಮತ್ತೆ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಪಾಕಿಸ್ತಾನ ನಾಯಕ ಬಾಬರ್​ ಭಾರತಕ್ಕೆ ಮೊದಲ ಬ್ಯಾಟಿಂಗ್​ ಆಹ್ವಾನ ನೀಡಿದ್ದಾರೆ.

ಈಗ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದಲ್ಲಿ ಎರಡು ತಂಡಗಳು ಮತ್ತೆ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಪಾಕಿಸ್ತಾನ ನಾಯಕ ಬಾಬರ್​ ಅಜಮ್​ ಭಾರತಕ್ಕೆ ಮೊದಲ ಬ್ಯಾಟಿಂಗ್​ ಆಹ್ವಾನ ನೀಡಿದ್ದಾರೆ. ಭಾರತ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಶ್ರೇಯಸ್​ ಅಯ್ಯರ್​ ಬದಲು ಕೆಎಲ್​ ರಾಹುಲ್​ ಅವರನ್ನು ತಂದಿದೆ. ಹಾಗೇ ಶಮಿಯನ್ನು ಕೈಬಿಟ್ಟು ಬುಮ್ರಾ ತಂಡಕ್ಕೆ ಸೇರ್ಪಡೆ ಆಗಿದ್ದಾರೆ.

ಪಾಕಿಸ್ತಾನ ತಂಡ ಕಳೆದ ರಾತ್ರಿಯೇ ತನ್ನ ತಂಡವನ್ನು ಪ್ರಕಟಿಸಿತ್ತು. ಗುಂಪು ಹಂತದ ಭಾರತದ ವಿರುದ್ಧದ ಪಂದ್ಯಕ್ಕೆ ಫಹೀಮ್ ಅಶ್ರಫ್ ಇರಲಿಲ್ಲ. ಇಂದಿನ ಪಂದ್ಯಕ್ಕೆ ಅವರನ್ನು ಆಡಿಸಲಾಗುತ್ತಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 7 ಓವರ್​ ಮಾಡಿ 27 ರನ್​ ಕೊಟ್ಟು 3.90 ಎಕಾನಮಿಯಲ್ಲಿ 1 ವಿಕೆಟ್​ ಪಡೆದು ಫಹೀಮ್ ಅಶ್ರಫ್ ಪ್ರಭಾವಿ ಬೌಲರ್​ ಎನಿಸಿಕೊಂಡಿದ್ದರು. ಹೀಗಾಗಿ ಅಶ್ರಫ್ ಅವರನ್ನು ಇಂದಿನ ಪಂದ್ಯಕ್ಕೆ ಬಾಬರ್​ ಉಳಿಸಿಕೊಂಡಿದ್ದಾರೆ.

 

 

ತಂಡಕ್ಕೆ ಮರಳಿದ ಕನ್ನಡಿಗ: ಕೆಎಲ್​ ರಾಹುಲ್​ ಏಷ್ಯಾಕಪ್​ ಪ್ರಾರಂಭದ ವೇಳೆ ಸಂಪೂರ್ಣ ಫಿಟ್​ ಆಗಿರದ ಕಾರಣ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಸೆಪ್ಟೆಂಬರ್​ 4 ರಂದು ನಡೆಸಿದ ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಸ್​ ಆದ ರಾಹುಲ್​ ತಂಡವನ್ನು ಸೇರಿಕೊಂಡಿದ್ದರು. ಇಂದಿನ ತಂಡದಲ್ಲಿ ಅಯ್ಯರ್​ ಅವರನ್ನು ಕೈಬಿಟ್ಟು ರಾಹುಲ್​ಗೆ ನಾಲ್ಕನೇ ಸ್ಥಾನದಲ್ಲಿ ಅವಕಾಶ ನೀಡಲಾಗಿದೆ. ಕಿಶನ್​ ಕೂಡಾ ತಂಡದಲ್ಲಿರುವುದರಿಂದ ರಾಹುಲ್​ಗೆ ಕೇವಲ ಬ್ಯಾಟಿಂಗ್​ ಜವಾಬ್ದಾರಿ ಮಾತ್ರ ನೀಡುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಧಾರವಾಡದಕ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ…. ವಿಘ್ನ ನಿವಾರಕ ಮೂರ್ತಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದ ಜೋಶಿ.

Spread the love ಧಾರವಾಡದಕ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳ ದರ್ಶನ ಪಡೆದ ಕೇಂದ್ರ ಸಚಿವ ಜೋಶಿ…. ವಿಘ್ನ ನಿವಾರಕ ಮೂರ್ತಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ