ವಿಜಯಪುರ… ಮರದಲ್ಲಿ ತೊಂಡೆಕಾಯಿ ಹರಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದಾನೆ.
ದನ ಕಾಯಲು ಹೋಗಿದ್ದಾಗ ಮರದಲ್ಲಿ ತೊಂಡೆಕಾಯಿ ಕಂಡು ಹರಿಯಲು ಹೋಗಿ ಬಾಲಕ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಖೈನೂರ ಗ್ರಾಮದಲ್ಲಿ ನಡೆದಿದೆ.
ಶಾಂತಪ್ಪ ಗಡಗಿಮನಿ (10) ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ. ದನ ಕಾಯಲು ಹೋಗಿದ್ದಾಗ ಮರದಲ್ಲಿ ತೊಂಡೆಕಾಯಿ ಹರಿಯುವ ವೇಳೆ ಮರದ ಪಕ್ಕದಲ್ಲಿ ವಿದ್ಯುತ್ ಕಂಬದಲ್ಲಿನ ವಿದ್ಯುತ್ ಸ್ಪರ್ಶಿಸಿ ಮರದಿಂದ ಬಿದ್ದು ಶಾಂತಪ್ಪ ಮೃತಪಟ್ಟಿದ್ದಾನೆ.
ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.
Laxmi News 24×7