Breaking News

ಚೇಂಬರ್ ಆಫ್ ಕಾಮರ್ಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ ಸಿ ಹೊಂಡದಕಟ್ಟಿ

Spread the love

ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನ ನೂತನ ಕಾರ್ಯನಿರ್ವಾಹಕರ ಪದಗ್ರಹಣ ಸಮಾರಂಭ ಬುಧವಾರ ಸಂಜೆ ಫೌಂಡ್ರಿ ಕ್ಲಸ್ಟರ್ ನಲ್ಲಿ ನಡೆಯಿತು

2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿ ಸಿ ಹೊಂಡದಕಟ್ಟಿ, ಹಿರಿಯ ಉಪಾಧ್ಯಕ್ಷ ಸಂಜೀವ್ ಕಟ್ಟಿಶೆಟ್ಟಿ, ಉಪಾಧ್ಯಕ್ಷ ಸತೀಶ ಕುಲಕರ್ಣಿ, ಕೀತ್ ಮಚಾಡೋ, ಕಾರ್ಯದರ್ಶಿ ರಾಜೇಂದ್ರ ಮುತಗೇಕರ, ಕೋಶಾಧಿಕಾರಿ ರೋಹಿತ್ ಕಪಾಡಿಯಾ ಅವರನ್ನು ನೇಮಿಸಲಾಯಿತು

ಹೇಮಚಂದ್ರ ಪೋರವಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ ಭಂಡಾರೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸತ್ಯನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಆನಂದ ದೇಸಾಯಿ ಮತ್ತು ಸತೀಶ ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಸ್ವಾಗತ ಗೀತೆಯನ್ನು ಸಂಜನಾ ಪ್ರಸ್ತುತ ಪಡಿಸಿದರು.

ಮಾಜಿ ಅಧ್ಯಕ್ಷ ಹೇಮೇಂದ್ರ ಪೋರವಾಲ ಅವರು ಸಿ.ಸಿ. ಹೊಂಡದಕಟ್ಟಿ ಅವರ ಕಾರ್ಯವನ್ನು ಮೆಚ್ಚಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು ನೂತನ ಅಧ್ಯಕ್ಷ ಸಿ.ಸಿ.ಹೊಂಡದಕಟ್ಟಿ ಅವರನ್ನು ಶ್ರೀಧರ ಉಪ್ಪಿನ್, ಕಾರ್ಯದರ್ಶಿ ಕೀತ್ ಮಚಾದೊ ಅವರನ್ನು ಉದಯ ಜೋಶಿ ಪರಿಚಯಿಸಿದರು.

ಮುಖ್ಯ ಅತಿಥಿ ಸತ್ಯನಾರಾಯಣ ಭಟ್ ಬೆಳಗಾವಿಯ ಉದ್ಯಮಿಗಳನ್ನು ಶ್ಲಾಘಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರದ ನಾನಾ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು. ರಾಮ್ ಭಂಡಾರೆ ನೂತನ ಕಾರ್ಯನಿರ್ವಾಹಕರನ್ನು ಅಭಿನಂದಿಸಿ ಎಂಎಸ್‌ಎಂಇಗಳು ಮತ್ತು ಕೈಗಾರಿಕಾ ವಲಯದ ಉದ್ಯಮಿಗಳ ಸಮಸ್ಯೆಗಳ ಕುರಿತು ಮಾತನಾಡಿದರು.


Spread the love

About Laxminews 24x7

Check Also

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು

Spread the love ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು ಅಮೆರಿಕಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ