Why Yuzvendra Singh Chahal Missing From World Cup Team :ಭಾರತ ತಂಡದಲ್ಲಿ ಈ ಹಿಂದೆ ಸ್ಟಾರ್ ಸ್ಪಿನ್ನರ್ ಆಗಿದ್ದ ಯಜುವೇಂದ್ರ ಚಹಾಲ್ಗೆ ಈ ವರ್ಷದ ವಿಶ್ವಕಪ್ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಅವರು ತೆರೆಮರೆಗೆ ಸರಿಯಲು ಕಾರಣ ಏನು ಎಂಬುದಕ್ಕೆ ಇಲ್ಲಿದೆ ಕಾರಣ..
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಲೆಗ್ ಬ್ರೇಕ್ ಮತ್ತು ಗೂಗ್ಲಿ ಸ್ಪೆಷಲಿಸ್ಟ್ ಯಜುವೇಂದ್ರ ಚಹಾಲ್ ಅವರನ್ನು ವಿಶ್ವಕಪ್ಗೆ ಏಕೆ ಆಯ್ಕೆ ಮಾಡಿಲ್ಲ ಎಂಬುದರ ಬಗ್ಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದರೆ, ತಂಡದಲ್ಲಿ ಇತ್ತೀಚಿನ ಸಂಯೋಜನೆಯನ್ನು ನೋಡಿದರೆ ಹೆಚ್ಚು ಆಲ್ರೌಂಡರ್ಗಳಿಗೆ ಮಣೆ ಹಾಕಲಾಗುತ್ತಿರುವ ಕಾರಣ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನ ಬ್ಯಾಟಿಂಗ್ ಕಾಂಬಿನೇಷನ್ನಲ್ಲಿ 8 ಮತ್ತು 9ನೇ ವಿಕೆಟ್ವರೆಗೂ ಬ್ಯಾಟಿಂಗ್ ಸಾಮರ್ಥ್ಯ ಇರುವುದನ್ನು ಕಾಣುತ್ತೇವೆ. ಇತ್ತೀಚೆಗೆ ಹೆಚ್ಚಿನ ತಂಡಗಳು ಡೆತ್ ಓವರ್ಗಳಲ್ಲಿ ಟೇಲ್ ಎಂಡ್ ಬ್ಯಾಟರ್ಗಳು ಕನಿಷ್ಠ 20 ರನ್ ಗಳಿಸ ಬೇಕು ಎಂದು ಆಪೇಕ್ಷಿಸಲಾಗುತ್ತಿದೆ. ಹೀಗಾಗಿ ಅಕ್ಷರ್ ಪಟೇಲ್ ಮತ್ತು ಜಡೇಜಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ವೇಗದ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಆಲ್ರೌಂಡರ್ಗಳಾಗಿ ಆಯ್ಕೆ ಮಾಡಲಾಗಿದೆ.
2016 ರಿಂದ ಈ ವರೆಗೆ ಚಹಾಲ್ ಏಕದಿನ ಬೌಲಿಂಗ್ ರೆಕಾರ್ಡ್
ಯುಜ್ವೇಂದ್ರ ಚಹಾಲ್ ಅವರ ಏಕದಿನ ವೃತ್ತಿಜೀವನದ ಅಂಕಿ – ಅಂಶಗಳನ್ನು ಗಮನಿಸಿದರೆ 2017 ರಿಂದ 2019ರ ವರೆಗೆ ಪೀಕ್ ಟೈಮ್ ಎಂದು ಪರಿಗಣಿಸಬಹುದಾಗಿದೆ. 2020 ಮತ್ತು 21 ರಲ್ಲಿ ಕೊವಿಡ್ ಕಾರಣಕ್ಕೆ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಆಟಗಾರರಿಗೆ ದೊರೆತಿಲ್ಲ. ಇದಾದ ನಂತರ ಚಹಾಲ್ ತಂಡದ ಆಯ್ಕೆಯ ವಿಚಾರದಲ್ಲಿ ತೆರೆಮರೆಗೆ ಹೋದರು. ಈ ವೇಳೆ, ಅಕ್ಷರ್ ಪಟೇಲ್ ಆಲ್ರೌಂಡರ್ ಮತ್ತು ಸ್ಪಿನ್ನರ್ ಆಗಿ ತಂಡದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದುಕೊಂಡರು. ಆದರೆ 2022 ರಲ್ಲಿ ಚಹಾಲ್ಗೆ ಹೆಚ್ಚಿನ ಅವಕಾಶ ಸಿಕ್ಕಿ ಉತ್ತಮ ಪ್ರರ್ದನ ನೀಡಿದರು.