Breaking News

ಕುಲಗೋಡಕ್ಕೆ ನಾಡ ಕಛೇರಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ

Spread the love

ಮೂಡಲಗಿ : ಕುಲಗೋಡ ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿರುವ ನಾಡ ಕಛೇರಿಯನ್ನು ಕುಲಗೋಡದಲ್ಲಿ ಆರಂಭಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕುಲಗೋಡ ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ಗ್ರಾಮಸ್ಥರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕುಲಗೋಡ ಗ್ರಾಮವು ಈಗಾಗಲೇ ಅರಭಾವಿ ನಾಡ ಕಛೇರಿಗೆ ಒಳಪಟ್ಟಿದ್ದರಿಂದ ಇಲ್ಲಿನ ಸಾರ್ವಜನಿಕರಿಗೆ ಅರಭಾವಿ ದೂರವಾಗುತ್ತಿರುವುದರಿಂದ ಕುಲಗೋಡದಲ್ಲಿಯೇ ಈ ಕಛೇರಿಯನ್ನು ಆರಂಭಿಸಲಿಕ್ಕೆ ಕಂದಾಯ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದೆ. ನಮ್ಮ ಸರ್ಕಾರವಿದ್ದಾಗ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡುತ್ತಿದ್ದೇವು. ಆದರೂ ಸಹಿತ ಕ್ಷೇತ್ರದ ಸಾರ್ವಜನಿಕರ ಕಷ್ಠ-ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಜನರಿಗೆ ನೀಡಿರುವ ಎಲ್ಲ ಆಶ್ವಾಸನೆಗಳನ್ನು ಈಡೇರಿಸುತ್ತೇನೆ. ರಸ್ತೆ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುತ್ತೇನೆ. ಕುಲಗೋಡ ಗ್ರಾಮಸ್ಥರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕುಲಗೋಡ ಗ್ರಾಮಸ್ಥರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಗ್ರಾಮ ಪಂಚಾಯತ ಅಧ್ಯಕ್ಷ ತಮ್ಮಣ್ಣ ದೇವರ, ಮುಖಂಡರಾದ ಬಸನಗೌಡ ಪಾಟೀಲ, ಗೋವಿಂದ ಕೊಪ್ಪದ, ಸುಭಾಸ ವಂಟಗೋಡಿ, ಪುಟ್ಟಣ್ಣ ಪೂಜೇರಿ, ಸುನೀಲ ವಂಟಗೋಡಿ, ಸತೀಶ ವಂಟಗೋಡಿ, ಶ್ರೀಪತಿ ಗಣಿ, ರಾಮಣ್ಣಾ ಭೈರನಟ್ಟಿ, ದತ್ತು ಕುಲಕರ್ಣಿ, ಅಶೋಕ ಚನ್ನಾಳ, ವೆಂಕಣ್ಣಾ ಚನ್ನಾಳ, ಬಸವಣ್ಣಿ ತಿಪ್ಪಿಮನಿ, ಹನಮಂತ ಚನ್ನಾಳ, ಪಾಪು ನಾಯಿಕ, ಚನ್ನಪ್ಪ ತಿಪ್ಪಿಮನಿ, ಅಲ್ಲಪ್ಪ ಪರುಶೆಟ್ಟಿ, ಸುಶೀಲಾ ಮಳಲಿ, ಮುಂತಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇತಿಹಾಸ ಪ್ರಸಿದ್ಧ ಕುಲಗೋಡ ಬಲಭೀಮ ದೇವರ ದರ್ಶನ ಪಡೆದರು. ಅರ್ಚಕ ಎಚ್.ಆರ್. ಪೂಜೇರಿ ಅವರು ಶಾಸಕರನ್ನು ಸತ್ಕರಿಸಿ, ಗೌರವಿಸಿದರು. ನಂತರ ಕುಲಗೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು-ಕೊರತೆಗಳನ್ನು ಬಾಲಚಂದ್ರ ಜಾರಕಿಹೊಳಿ ಆಲಿಸಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ