Breaking News

ದಸರಾ ಗಜಪಡೆ ತೂಕ ಪರೀಕ್ಷೆ.. ಕ್ಯಾಪ್ಟನ್ ಅಭಿಮನ್ಯುನೇ ಹೆಚ್ಚು ಬಲಶಾಲಿ

Spread the love

ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಯಿತು. ತೂಕದಲ್ಲಿ ಅಂಬಾರಿ ಹೋರುವ ಅಭಿಮನ್ಯು ಹೆಚ್ಚು ಬಲಶಾಲಿಯಾಗಿದ್ದಾನೆ. 2ನೇ ಹಂತದಲ್ಲಿ ಬರುವ ಐದು ಆನೆಗಳ ಜತೆ ಅರ್ಜುನ ಆನೆಯನ್ನು ಸಹ ತೂಕ ಮಾಡಲಾಗುವುದು ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು.

ನಿನ್ನೆ (ಮಂಗಳವಾರ) ಅಭಿಮನ್ಯು ನೇತೃತ್ವದ 8 ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಅರಮನೆಗೆ ಸ್ವಾಗತ ಕೋರಲಾಯಿತು. ಅರಮನೆ ಪ್ರವೇಶ ಮಾಡಿದ ಗಜಪಡೆಗೆ ತಾಲೀಮಿಗೆ ಮುನ್ನ ಇಂದು ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮನ್ ಕೋ ಎಲೆಕ್ಟ್ರಿಕಲ್ ತೂಕ ಮಾಪನ ಕೇಂದ್ರದಲ್ಲಿ 8 ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ತೂಕದಲ್ಲಿ ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ‘ಅಭಿಮನ್ಯು’ ಹೆಚ್ಚು ತೂಕ ಹೊಂದಿದ್ದಾನೆ.

ದಸರಾ ಗಜಪಡೆಯ ತೂಕದ ವಿವರ ಹೀಗಿದೆ

  • ಅಭಿಮನ್ಯು- 5,160.
  • ಧನಂಜಯ-4,940.
  • ಮಹೇಂದ್ರ 4,530.
  • ಭೀಮಾ- 4,370.
  • ಕಂಜನ್- 4,240.
  • ಗೋಪಿ-5080
  • ಹೆಣ್ಣಾನೆಗಳಾದ ವರಲಕ್ಷ್ಮಿ-3,020.
  • ವಿಜಯಾ-28,30 ಕೆ.ಜಿ ತೂಕ ಹೊಂದಿವೆ.

ಈ ಆನೆಗಳ ಜೊತೆ ಗಜಪಯಣದ ಮೂಲಕ ಆಗಮಿಸಿದ ಅರ್ಜುನ ಆನೆ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದೆ. ಒಂದೆರೆಡು ದಿನಗಳಲ್ಲಿ ವಾಪಸ್ ಅರಮನೆಗೆ ಆಗಮಿಸುವ ಅರ್ಜುನ ಆನೆಯನ್ನು 2ನೇ ಹಂತದಲ್ಲಿ ಬರುವ 5 ಆನೆಗಳ ಜೊತೆ ತೂಕ ಮಾಡಲಾಗುವುದು ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದ್ದಾರೆ.

ಗಜ ಪಡೆ ಕಂಡು ಕೈ ಮುಗಿದ ಜನ: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಮೊದಲ ದಿನ ತೂಕ ಹಾಕಲು, ಅರಮನೆಯ ಬಲರಾಮ ದ್ವಾರದ ಮೂಲಕ ಹೊರ ಬಂದು, ಕೆಆರ್ ಸರ್ಕಲ್, ದೇವರಾಜ ಮಾರುಕಟ್ಟೆ, ಸಯ್ಯಾಜಿ ರಾವ್ ರಸ್ತೆ ಮೂಲಕ ಧನ್ವಂತರಿ ರಸ್ತೆಗೆ ಆಗಮಿಸಿದೆ. ಡಿಸಿಪಿ ನೇತೃತ್ವದ ಭದ್ರತೆಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ರಸ್ತೆಯಲ್ಲಿ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಂತೆ ಗಜ ಪಡೆಯನ್ನ ಕಂಡು ಜನರು ಕೈ ಮುಗಿದು ಆನೆಗಳಿಗೆ ಹೂ ನೀಡಿದರು.


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ