Breaking News

ಟೀಮ್​ ಜರ್ಸಿಯಲ್ಲಿ “ಇಂಡಿಯಾ” ತೆಗೆದು “ಭಾರತ್​” ಮಾಡಿ.. ಪಾರ್ಟ್‌ಟೈಮ್ ಎಂಪಿ ಆಗಿರುವುದಕ್ಕಿಂತ ಫುಲ್​ಟೈಂ ಕ್ರಿಕೆಟಿಗನಾಗಿರುವೆ: ಸೆಹ್ವಾಗ್

Spread the love

ಹೈದರಾಬಾದ್​​​: ಇಂದು ಟ್ವಿಟರ್​ನಲ್ಲಿ ಎರಡು ವಿಷಯ ಟ್ರೆಂಡಿಂಗ್​ ಆಗಿದೆ. ಅದು ‘ಇಂಡಿಯಾ’ ವರ್ಸಸ್ ‘ಭಾರತ್’ ಆಗಿದ್ದರೆ, ಮತ್ತೊಂದೆಡೆ ವಿರೇಂದ್ರ ಸೆಹ್ವಾಗ್​, ಈ ಚರ್ಚೆ ಮುನ್ನಲೆಗೆ ಬರುವ ಮುನ್ನವೇ ಟೀಂ ಭಾರತ ಎಂದು ಹ್ಯಾಷ್​ ಟ್ಯಾಗ್​ ಹಾಕಿದ್ದರು.

ಈ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

 

 

ಈ ನಡುವೆ ಭಾರತ ಸಂವಿಧಾನದಲ್ಲಿನ ಇಂಡಿಯಾ ಎಂಬ ಪದಕ್ಕೆ ಕೊಕ್​ ನೀಡಿ ಭಾರತವನ್ನು ಮಾತ್ರ ಉಳಿಸಿಕೊಳ್ಳುವ ನಿರ್ಧರಿಸಿದೆ ಎನ್ನಲಾಗಿದೆ. ಮುಂಬರುವ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಲಾಗುತ್ತಿದೆ.

 

 

ಈ ವಿಚಾರದಲ್ಲಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಅವರಿಗೂ ಈ ಚರ್ಚೆಗೂ ಏನು ಸಂಬಂಧ ಎಂದು ನೀವೆಲ್ಲ ಕೇಳಬಹುದು. ಅದಕ್ಕೆಲ್ಲ ಕಾರಣ ಇದೆ. ಮೊನ್ನೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವ ವೇಳೆ #INDvsPAK ಎಂಬ ಹ್ಯಾಷ್​ ಟ್ಯಾಗ್​ ಟ್ರೆಂಡ್​ ಆಗಿತ್ತು. ಆದರೆ, ಸೆಹ್ವಾಗ್​ ಈ ಪಂದ್ಯದ ವೇಳೆ #BHA vs PAK ಎಂಬ ಹ್ಯಾಷ್​ಟ್ಯಾಗ್ ಬಳಸಿದ್ದರು. ಈಗ ಇಂಡಿಯಾವನ್ನು ಭಾರತ್​ ಎಂದು ಬದಲಾಯಿಸುವ ವಿಷಯ ಸೆಹ್ವಾಗ್​ ಮೊದಲೇ ತಿಳಿದು ಈ ರೀತಿ ಟ್ವೀಟ್​​ ಮಾಡಿದ್ದೀರಾ ಎಂಬಂತಹ ಕಮೆಂಟ್​ಗಳು ಎಕ್ಸ್​ ಖಾತೆಯಲ್ಲಿ ಹರಿದು ಬರುತ್ತಿವೆ. ಇದಕ್ಕೆ ಹೌದು ಎಂದು ಸೆಹ್ವಾಗ್​ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ